Latest Kannada Nation & World
ರೈಲ್ವೆ ಟಿಕೆಟ್ ಬುಕಿಂಗ್ ಅವಧಿಯನ್ನು 120 ರಿಂದ 60 ದಿನಕ್ಕೆ ಇಳಿಸಿದ್ದೇಕೆ? ಇಲ್ಲಿದೆ ಅಸಲಿ ಕಾರಣ

ಭಾರತೀಯ ರೈಲ್ವೆ ಇಲಾಖೆಯು (Indian Railway) ನವೆಂಬರ್ 1ರಿಂದ ಮುಂಗಡ ರೈಲು ಟಿಕೆಟ್ ಬುಕಿಂಗ್ ನಿಯಮಗಳಲ್ಲಿ ಬದಲಾವಣೆ ತರಲಿದ್ದು, ಪ್ರಸ್ತುತ ಚಾಲ್ತಿಯಲ್ಲಿರುವ 4 ತಿಂಗಳ ಮೊದಲೇ ಟಿಕೆಟ್ ಬುಕ್ (Ticket Book) ಮಾಡುವ ಅವಕಾಶವನ್ನು 2 ತಿಂಗಳಿಗೆ ಇಳಿಸಿದೆ. ಅಂದರೆ ಟಿಕೆಟ್ ಕಾಯ್ದಿರಿಸುವ ಅವಧಿಯನ್ನು 120 ದಿನಗಳಿಂದ 60 ದಿನಕ್ಕೆ ಇಳಿಸಿದೆ. ನಿಜವಾದ ಪ್ರಯಾಣಿಕರಿಗೆ ಹೆಚ್ಚು ಅನುಕೂಲವಾಗಲೆಂದು ರೈಲ್ವೆ ಮಂಡಳಿ ಈ ಕ್ರಮ ಕೈಗೊಂಡಿದೆ. ಆದರೆ, ಈ ನಿರ್ಧಾರ ಕೈಗೊಳ್ಳಲು ಪ್ರಮುಖ ಕಾರಣ ಏನು? ಸಚಿವಾಲಯ ಈ ಕ್ರಮಕ್ಕೆ ಮುಂದಾಗಿದ್ದೇಕೆ? ಇಲ್ಲಿದೆ ವಿವರ.