Latest Kannada Nation & World
ಮನುಷ್ಯನಂತೆ ಮಾತನಾಡುವ ಅಪರೂಪದ ಕಾಗೆ; ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ ವಿಡಿಯೋ

ಮಹಾರಾಷ್ಟ್ರದ ಪಾಲ್ಘರ್ನಲ್ಲಿ ಈ ಕಾಗೆ ಪ್ರಮುಖ ಆಕರ್ಷಣೆಯಾಗಿದೆ. ಸ್ಪಷ್ಟವಾಗಿ ಪದಗಳನ್ನು ಉಚ್ಚಾರ ಮಾಡುತ್ತದೆ. ಈ ಕಾಗೆ ಮನುಷ್ಯರಂತೆ ಮಾತನಾಡಬಲ್ಲದು. ಗಿಣಿಗಳು ಮನುಷ್ಯರನ್ನು ಅನುಕರಿಸಿ ಮಾತನಾಡುವುದನ್ನು ನಾವು ಸಾಮಾನ್ಯವಾಗಿ ನೋಡುತ್ತೇವೆ. ಆದರೆ ಕಾಗೆ ಮಾತನಾಡುವುದನ್ನು ನೋಡುವುದು ಬಲು ಅಪರೂಪ. ಆ ಕಾರಣಕ್ಕಾಗಿಯೇ ಈ ವಿಡಿಯೋ ಇಷ್ಟೊಂದು ವೈರಲ್ ಆಗುತ್ತಿದೆ. ನಿಜವಾಗಿಯೂ ಈ ವಿಡಿಯೋ ಅದ್ಭುತವಾಗಿದೆ. ಈ ಕಾಗೆ ಬಾಬಾ, ಕಾಕಾ, ಅಮ್ಮ, ಬಾಬು, ನೀವು ಏನು ಮಾಡುತ್ತಿದ್ದೀರಿ? ಎಂದೆಲ್ಲ ಮಾತಾಡುತ್ತದೆ.