Latest Kannada Nation & World
ಮಮ್ಮುಟ್ಟಿಗೆ ಕ್ಯಾನ್ಸರ್, ಚೆನ್ನೈ ಆಸ್ಪತ್ರೆಗೆ ದಾಖಲು; ವದಂತಿ ಕುರಿತು ಸ್ಪಷ್ಟನೆ ನೀಡಿದ ಪಿಆರ್‌ಒ ತಂಡ

ಮಲಯಾಳಂ ಚಿತ್ರರಂಗದ ಖ್ಯಾತ ನಟ ಮಮ್ಮುಟ್ಟಿ ಆರೋಗ್ಯಕ್ಕೆ ಸಂಬಂಪಟ್ಟಂತೆ ನಿನ್ನೆಯಿಂದ ಹಲವು ವದಂತಿ ಹರಿದಾಡುತ್ತಿದ್ದವು. ಮಮ್ಮುಟ್ಟಿಗೆ ಕ್ಯಾನ್ಸರ್ ಅಂತೆ.. ಗಂಭೀರ ಸ್ಥಿತಿಯಲ್ಲಿ ಚೆನ್ನೈನ ಆಸ್ಪತ್ರೆಗೆ ದಾಖಲಾಗಿದ್ದರಂತೆ… ಈ ಎಲ್ಲಾ ವದಂತಿ ಕುರಿತು ಮಮ್ಮುಟ್ಟಿ ಅವರ ಪಿಆರ್ ತಂಡವು ಸ್ಪಷ್ಟನೆ ನೀಡಿದೆ. “ಈ ಎಲ್ಲಾ ವದಂತಿ ಸುಳ್ಳು, ಮಮ್ಮುಟ್ಟಿ ಆರೋಗ್ಯವಾಗಿದ್ದಾರೆ. ಸದ್ಯ ರಮಝಾನ್ ಇರುವುದರಿಂದ ಚಿತ್ರೀಕರಣದಲ್ಲಿ ಭಾಗಿಯಾಗುತ್ತಿಲ್ಲ” ಎಂದು ಮಮ್ಮುಟ್ಟಿ ಅವರ ಪಿಆರ್ ತಂಡವು ಸ್ಪಷ್ಟಪಡಿಸಿದೆ.