Latest Kannada Nation & World
ಮರಕ್ಕರ್ ದಾಖಲೆಯನ್ನು ಪುಡಿಗಟ್ಟುವುದೇ ಬರೋಜ್? ಸೂಪರ್‌ಸ್ಟಾರ್ ಮೋಹನ್‌ಲಾಲ್ 3ಡಿ ಸಿನಿಮಾ ಡಿಸೆಂಬರ್ 25ರಂದು ಬಿಡುಗಡೆ

ಮುಂಗಡ ಟಿಕೆಟ್ ಬುಕ್ಕಿಂಗ್ ಹೇಗಿದೆ?
ಈ ವರ್ಷದ ಆರಂಭದಲ್ಲಿ ಮಲೈಕೊಟ್ಟೈ ವಾಲಿಬನ್ ಸಿನಿಮಾದಲ್ಲಿ ಮೋಹನ್ ಲಾಲ್ ಕಾಣಿಸಿಕೊಂಡಿದ್ದರು. ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದ ಆ ಸಿನಿಮಾ ಕಳಪೆ ಪ್ರದರ್ಶನ ಕಂಡಿತ್ತು. ಈಗ ಬರೋಜ್ ಎಂಬ ದೊಡ್ಡ ಪ್ರಾಜೆಕ್ಟ್ ಬಿಡುಗಡೆಯಾಗಲಿದೆ. ಕ್ರಿಸ್ಮಸ್ ರಜೆಯ ದಿನವೇ, ಅಂದರೆ ಡಿಸೆಂಬರ್ 25ರಂದು ಬಿಡುಗಡೆಯಾಗಲಿರುವ ಸಿನಿಮಾವು ಗಲ್ಲಾಪೆಟ್ಟಿಗೆಯಲ್ಲಿ ಹೊಸ ದಾಖಲೆ ನಿರ್ಮಿಸುವ ನಿರೀಕ್ಷೆಯಿದೆ. ಕ್ರಿಸ್ಮಸ್ ರಜೆಯಂದು ಸಾಕಷ್ಟು ಜನರು ಥಿಯೇಟರ್‌ಗೆ ಆಗಮಿಸುವ ಸೂಚನೆಯಿದೆ. 3ಡಿ ಸಿನಿಮಾದ ಟಿಕೆಟ್ ದರವೂ ಹೆಚ್ಚಿರುವುದರಿಂದ ಗಳಿಕೆ ದೊಡ್ಡಮಟ್ಟದಲ್ಲಿ ಇರಲಿದೆ. ಭಾರತದಲ್ಲಿ ಮೊದಲ ದಿನದಲ್ಲಿ 6.50-8 ಕೋಟಿ ಗಳಿಕೆ ಮಾಡುವ ಸೂಚನೆಯಿದೆ ಎಂದು ವರದಿಗಳು ತಿಳಿಸಿವೆ.