ಮರಣದ ನಂತರ ತುಳಸಿ ಎಲೆ, ಗಂಗಾ ಜಲವನ್ನು ಮೃತರ ಬಾಯಿಗೆ ಹಾಕಲು ಕಾರಣವೇನು? ಧಾರ್ಮಿಕ ನಂಬಿಕೆ ಹೀಗಿದೆ

ಗಂಗಾ ಜಲವು ಶುದ್ಧತೆಯ ಸಂಕೇತ
ಯಾವುದೇ ಪೂಜೆಯನ್ನು ಮಾಡುವಾಗ, ಪೂಜಾ ಸಾಮಗ್ರಿಗಳ ಮೇಲೆ ಮತ್ತು ಭಕ್ತರ ಮೇಲೆ ನೀರನ್ನು ಸಿಂಪಡಿಸಿ ಶುದ್ದೀಕರಿಸಲಾಗುತ್ತದೆ. ಹಿಂದೂ ಧರ್ಮದಲ್ಲಿ ಗಂಗಾ ನೀರನ್ನು ಪವಿತ್ರವೆಂದು ಪರಿಗಣಿಸಲಾಗಿದೆ. ಇದನ್ನು ಅಮೃತಕ್ಕೆ ಸಮಾನವೆಂದೂ ಹೇಳಲಾಗುತ್ತದೆ. ಗಂಗೆಯನ್ನು “ಸ್ವರ್ಗದ ನದಿ” ಎಂದೂ ಕರೆಯುತ್ತಾರೆ. ಅದರಲ್ಲಿ ಸ್ನಾನ ಮಾಡುವುದರಿಂದ ವ್ಯಕ್ತಿಯ ಎಲ್ಲಾ ಪಾಪಗಳು ನಾಶವಾಗುತ್ತದೆ ಎಂಬ ನಂಬಿಕೆಯಿದೆ. ಅದು ವಿಷ್ಣುವಿನ ಪಾದಗಳಿಂದ ಹುಟ್ಟಿ, ಶಿವನ ಜಟೆಯಲ್ಲಿ ವಾಸಿಸುತ್ತಿತ್ತು. ನಂತರ ಭಗೀರಥನು ಗಂಗೆಯನ್ನು ಅವನ ಪೂರ್ವಜರ ಪಾಪಗಳನ್ನು ತೊಳೆಯಲು ಭೂಮಿಗೆ ಕರೆತಂದನು. ಪಾಪಗಳನ್ನು ತೊಳೆಯುವ ಪಾಪನಾಶಿನಿಯಾದ ಕಾರಣಕ್ಕಾಗಿ, ಸಾವಿನ ಸಮಯದಲ್ಲಿ ಗಂಗಾ ನೀರನ್ನು ಬಾಯಿಗೆ ಹಾಕಲಾಗುತ್ತದೆ. ಆತ್ಮವು ದೇಹವನ್ನು ತೊರೆದಾಗ ಹೆಚ್ಚು ನೋವು ಅನುಭವಿಸಬೇಕಾಗುತ್ತದೆ. ಸತ್ತ ವ್ಯಕ್ತಿಯ ಬಾಯಿಯಲ್ಲಿ ಗಂಗಾ ನೀರನ್ನು ಹಾಕುವುದರಿಂದ, ಆ ವ್ಯಕ್ತಿಗೆ ಸಾವಿನ ನಂತರ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಎಂದು ಹೇಳಲಾಗುತ್ತದೆ. ಇದು ಆತ್ಮದ ಮುಂದಿನ ಪ್ರಯಾಣವನ್ನು ಸುಲಭಗೊಳಿಸುತ್ತದೆ.