Latest Kannada Nation & World
ಮರ್ಫಿ ಟ್ರೇಲರ್ ರಿಲೀಸ್; ಪ್ರಿಯಾಂಕಾ ಉಪೇಂದ್ರ, ಖುಷಿ ರವಿ ಸೇರಿದಂತೆ ಪ್ರಭು ಮುಂಡ್ಕೂರ್ ಸಿನಿಮಾಗೆ ಸಾಥ್ ಕೊಟ್ಟ ನವ ನಟಿಯರು

ಅಕ್ಟೋಬರ್ 18ರಂದು ತೆರೆ ಕಾಣುತ್ತಿರುವ ಮರ್ಫಿ
ನಿರ್ದೇಶಕರಾದ ಬಿಎಸ್‌ಪಿ ವರ್ಮಾ ಮಾತನಾಡಿ, ಅದ್ಭುತ ತಂಡದ ಜೊತೆ ಕೆಲಸ ಮಾಡಿದ ಖುಷಿ ನನ್ನಲ್ಲಿದೆ. ಇದೇ 18ರಂದು ಸಿನಿಮಾ ಬಿಡುಗಡೆಯಾಗುತ್ತಿದೆ. ನಿಮ್ಮ ಆಶೀರ್ವಾದ ನಮ್ಮ ಚಿತ್ರದ ಮೇಲೆ ಇರಲಿ ಎಂದರು. ಮರ್ಫಿ ಟ್ರೇಲರ್ ಬಹಳ ಪ್ರಾಮಿಸಿಂಗ್ ಆಗಿದೆ. ಪ್ರೀತಿ ಭಾವನೆ, ನೆನಪುಗಳ ಸುತ್ತಾ ಸಾಗುವ ರೊಮ್ಯಾಟಿಂಕ್ ಪ್ರೇಮ ಕಥಾಹಂದರಕ್ಕೆ BSP ವರ್ಮಾ ಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಪ್ರಭು ಮುಂಡ್ಕೂರ್ ವರ್ಮಾ ಚಿತ್ರಕಥೆ ಬರೆಯುವುದರ ಜೊತೆಗೆ ನಾಯಕನಾಗಿಯೂ ಬಣ್ಣ ಹಚ್ಚಿದ್ದಾರೆ. ರೋಶಿನಿ ಪ್ರಕಾಶ್ , ಇಳಾ ವೀರಮಲ್ಲ ಜೊತೆಯಲ್ಲಿ ದತ್ತಣ್ಣ, ಅಶ್ವಿನಿ ರಾವ್ ಪಲ್ಲಕ್ಕಿ, ಮಹಾಂತೇಶ್ ಹೀರೇಮಠ್, ರಾಮಪ್ರಸಾದ್ ಬಾಣಾವರ ಸೇರಿದಂತೆ ಹಲವರು ಚಿತ್ರದಲ್ಲಿ ನಟಿಸಿದ್ದಾರೆ. ನವೀನ್ ರೆಡ್ಡಿ, ಪ್ರಭು, ವರ್ಮಾ ಸಂಭಾಷಣೆ ಬರೆದಿದ್ದು, ಮಹೇಶ ತೊಗಟ ಸಂಕಲನ, ಆದರ್ಶ ಆರ್ ಕ್ಯಾಮೆರಾ ಹಿಡಿದ್ದಾರೆ.