Latest Kannada Nation & World
ಮಲಗಿದ್ದ ಯುವರಾಜ್ ಸಿಂಗ್ ಎಬ್ಬಿಸಿ ಚಿಕ್ಕ ಮಕ್ಕಳಂತೆ ಹೋಳಿ ಫ್ರಾಂಕ್ ಮಾಡಿದ ಸಚಿನ್ ತೆಂಡೂಲ್ಕರ್; ತಮಾಷೆಯ ವಿಡಿಯೋ ವೈರಲ್

ಮಲಗಿದ್ದ ಯುವಿಯನ್ನು ಎಬ್ಬಿಸಿ ಹೋಳಿ ಸಂಭ್ರಮ
ಅಂಬಟಿ ರಾಯುಡು, ಯೂಸುಫ್ ಫಠಾಣ್, ಸಚಿನ್ ತೆಂಡೂಲ್ಕರ್ ಸೇರಿದಂತೆ ತಂಡದ ಆಟಗಾರರು ಒಟ್ಟಾಗಿ ಪರಸ್ಪರ ಬಣ್ಣ ಎರಚಿ ಹೋಳಿ ಆಚರಿಸಿದ್ದಾರೆ. ಆದರೆ ವಿಶ್ರಾಂತಿ ಪಡೆಯುತ್ತಿದ್ದ ಯುವರಾಜ್ ಕೊಠಡಿಗೆ ಸಚಿನ್ ಮತ್ತು ಸಹ ಆಟಗಾರರು ಹೋದರು. ಬಾಗಿಲು ಬಡಿದು ಮಲಗಿದ್ದ ಯುವರಾಜ್ನನ್ನು ಎಬ್ಬಿಸಿದರು. ಯುವರಾಜ್ ಎದ್ದು ತಮ್ಮ ಕೋಣೆಯ ಬಾಗಿಲು ತೆರೆದಾಗ, ಎಲ್ಲರೂ ಅವರ ಮೇಲೆ ಬಿದ್ದು ಬಣ್ಣ ಹಚ್ಚಿದರು.