Latest Kannada Nation & World
ಮಲಯಾಳಂ ಬ್ಲಾಕ್ ಬಸ್ಟರ್ ಮಾರ್ಕೊ ಚಿತ್ರ ಒಟಿಟಿಗೆ ಎಂಟ್ರಿ; ಈ ಆಕ್ಷನ್ ಥ್ರಿಲ್ಲರ್ ಸಿನಿಮಾವನ್ನು ಕನ್ನಡದಲ್ಲೂ ಕಣ್ತುಂಬಿಕೊಳ್ಳ

ಕನ್ನಡದಲ್ಲೂ ಸ್ಟ್ರೀಮಿಂಗ್
ಮಾರ್ಕೊ ಸಿನಿಮಾ ಮೂಲ ಮಲಯಾಳಂನಲ್ಲಿ ನಿರ್ಮಾಣವಾಗಿದೆ. ಈ ಸಿನಿಮಾ ಇದೀಗ ಒಟಿಟಿ ಅಂಗಳ ಪ್ರವೇಶಿಸಿದ್ದು, ಕನ್ನಡ, ತಮಿಳು, ತೆಲುಗು ಭಾಷೆಗಳಲ್ಲಿಯೂ ವೀಕ್ಷಣೆ ಮಾಡಬಹುದಾಗಿದೆ. ಅಂದಹಾಗೆ, ಮಾಲಿವುಡ್‌ನ ಆಕ್ಷನ್ ಥ್ರಿಲ್ಲರ್ ಮಾರ್ಕೊ ಚಿತ್ರವನ್ನು ಹನೀಫ್ ಅದೇನಿ ನಿರ್ದೇಶನ ಮಾಡಿದ್ದಾರೆ. ಶರೀಫ್ ಮಹಮ್ಮದ್ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಮುಕುಂದನ್ ಜತೆಗೆ ಜಗದೀಶ್, ಸಿದ್ದಿಕ್, ಅನ್ಸನ್ ಪೌಲ್, ಯುಕ್ತಿ ಥರೇಜಾ, ರಿಯಾಜ್ ಖಾನ್, ಜಿನು ಜೋಸೆಫ್, ಶ್ರೀಜಿತ್ ರವಿ ಮತ್ತು ಕಬೀರ್ ದುಹಾನ್ ಸಿಂಗ್ ತಾರಾಗಣದಲ್ಲಿದ್ದಾರೆ.