Latest Kannada Nation & World
ಮಲೈಕಾ ಅರೋರಾ, ಅರ್ಜುನ್ ಕಪೂರ್ ಬ್ರೇಕಪ್? ಆಕೆಯ ನಿಗೂಢ ಪೋಸ್ಟ್, ಈತನ ವಿಚಿತ್ರ ಪ್ರತಿಕ್ರಿಯೆಗೆ ನಾನಾ ಅರ್ಥ

ಮಲೈಕಾ ಅರೋರಾ ಪೋಸ್ಟ್‌ನಲ್ಲಿ ಏನಿದೆ?
ಇತ್ತೀಚೆಗೆ ನಟಿ ಮಲೈಕಾ ಅರೋರಾ ಅವರು ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಈ ರೀತಿ ಪೋಸ್ಟ್ ಮಾಡಿದ್ದಾರೆ. “ಹೃದಯವನ್ನು ಟಚ್ ಮಾಡಲು ಸೆಕೆಂಡ್‌ಸಾಕು, ಆದರೆ, ಆತ್ಮವನ್ನು ಮುಟ್ಟಲು ಜೀವನಪೂರ್ತಿ ಸಮಯ ಬೇಕು” ಎಂದು ಬರೆದಿದ್ದಾರೆ. ಇದಾದ ಬಳಿಕ ಇವರು ಗುಡ್‌ಮಾರ್ನಿಂಗ್ ಮೆಸೆಜ್ ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ಗೆ ಏನೂ ವಿಶೇಷ ಅರ್ಥವನ್ನು ಇವರು ಸೂಚಿಸಿಲ್ಲ. ಇದು ಪ್ರತಿದಿನದ ಗುಡ್‌ಮಾರ್ನಿಂಗ್ ಮೆಸೆಜ್ ಎಂದುಕೊಳ್ಳಬಹುದು ಅಥವಾ ಎಂದುಕೊಳ್ಳದೆಯೂ ಇರಬಹುದು. ಆದರೆ, ಇದಕ್ಕೂ ಮುನ್ನ ಅರ್ಜುನ್ ಕಪೂರ್ ಬ್ರೇಕಪ್ ಸೂಚನೆ ನೀಡಿರುವುದರಿಂದ ಈ ಪೋಸ್ಟ್ ನಾನಾರ್ಥಗಳನ್ನು ಉಂಟುಮಾಡಿದೆ.