Latest Kannada Nation & World
ಮಹಾರಾಷ್ಟ್ರ ವಿರುದ್ಧ ವಿದರ್ಭ ತಂಡಕ್ಕೆ ಭರ್ಜರಿ ಗೆಲುವು, ಕನ್ನಡಿಗನ ಸಾರಥ್ಯದಲ್ಲಿ ಚೊಚ್ಚಲ ಫೈನಲ್ ಪ್ರವೇಶ

ಪ್ರಸಕ್ತ ಸಾಲಿನ ವಿಜಯ್ ಹಜಾರೆ ಟ್ರೋಫಿಯಲ್ಲಿ ವಿದರ್ಭ ತಂಡ ಜಯದ ನಾಗಾಲೋಟ ಮುಂದುವರೆಸಿದೆ. ಸೆಮಿಫೈನಲ್ ಪಂದ್ಯದಲ್ಲಿ ಮಹಾರಾಷ್ಟ್ರ ತಂಡವನ್ನು 69 ರನ್ಗಳ ಅಂತರದಿಂದ ಮಣಿಸಿ ಅಜೇಯವಾಗಿ ಫೈನಲ್ ತಲುಪಿದೆ. ಜನವರಿ 16ರ ಗುರುವಾರ ನಡೆದ 2ನೇ ಸೆಮಿಫೈನಲ್ನಲ್ಲಿ 380 ರನ್ಗಳ ಬೃಹತ್ ಮೊತ್ತ ಪೇರಿಸಿದ್ದ ಕನ್ನಡಿಗ ಕರುಣ್ ನಾಯರ್ ನೇತೃತ್ವದ ವಿದರ್ಧ, ಇದೇ ಮೊದಲ ಬಾರಿಗೆ ಫೈನಲ್ ಟಿಕೆಟ್ ಗಿಟ್ಟಿಸಿಕೊಂಡಿದೆ. ಇದೀಗ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ 4 ಬಾರಿಯ ಚಾಂಪಿಯನ್ ಆಗಿರುವ ಕರ್ನಾಟಕ ತಂಡವನ್ನು ಎದುರಿಸಲು ಕರುಣ್ ಪಡೆ ಸಜ್ಜಾಗಿದೆ. ಜನವರಿ 18ರ ಶನಿವಾರ ಫೈನಲ್ ಪಂದ್ಯ ನಡೆಯಲಿದೆ.