Latest Kannada Nation & World
ಈ ವಾರ ಒಟಿಟಿಯಲ್ಲಿ ಬಿಡುಗಡೆ ಆಗಲಿರುವ ಟಾಪ್ 3 ಮಲಯಾಳಿ ಸಿನಿಮಾಗಳಿವು; ಎಲ್ಲವೂ ಒಂದಕ್ಕಿಂತ ಒಂದು ಟಾಪ್

ರೇಖಾಚಿತ್ರಂ – ಸೋನಿಲೈವ್
ಈ ವರ್ಷದ ಜನವರಿ 9ರಂದು ಬಿಡುಗಡೆಯಾದ ಮಲಯಾಳಂ ಸಿನಿಮಾ ರೇಖಾಚಿತ್ರಂ. ಆಸಿಫ್ ಅಲಿ ಅಭಿನಯದ ಈ ಕ್ರೈಮ್ ಥ್ರಿಲ್ಲರ್ ಚಿತ್ರ ಬುಧವಾರದಿಂದ (ಫೆಬ್ರವರಿ 5) ಸೋನಿಲೀವ್ ಒಟಿಟಿಯಲ್ಲಿ ಪ್ರಸಾರವಾಗಲಿದೆ. ಕೇವಲ 9 ಕೋಟಿ ರೂ.ಗಳ ಬಜೆಟ್‌ನಲ್ಲಿ ನಿರ್ಮಿಸಲಾದ ಈ ಚಿತ್ರವು ಬಾಕ್ಸ್ ಆಫೀಸ್ ನಲ್ಲಿ 55 ಕೋಟಿ ರೂ. ಗಳಿಸಿದೆ. ಜೋಫಿನ್ ಚಾಕೋ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಆಸಿಫ್ ಅಲಿ ಅವರೊಂದಿಗೆ ಅನಸ್ವರ ರಾಜನ್ ಮತ್ತು ಮನೋಜ್ ಕೆ ಜಯನ್. ನಟಿಸಿದ್ದಾರೆ. ಇದು ಮರ್ಡರ್ ಮಿಸ್ಟರಿ ಇನ್ವಿಸ್ಟಿಗೇಟಿವ್ ಕ್ರೈಮ್ ಥ್ರಿಲ್ಲರ್ ಚಿತ್ರವಾಗಿದ್ದು, ಜೂಜಾಟ ಹಗರಣದಲ್ಲಿ ಸಿಕ್ಕಿಬಿದ್ದು, ಅಮಾನತುಗೊಂಡ ಪೊಲೀಸ್ ಅಧಿಕಾರಿ, 40 ವರ್ಷಗಳ ಹಿಂದಿನ ಕೊಲೆ ಪ್ರಕರಣವನ್ನು ಹೇಗೆ ಬಗೆಹರಿಸುತ್ತಾನೆ ಎಂಬುದೇ ಕಥೆ.