ಮಾಂಗಲ್ಯಕ್ಕೆ ಕೈ ಹಾಕಿದ ಶ್ರೇಷ್ಠಾ ಕೆನ್ನೆಗೆ ಎಲ್ಲರೆದುರು ಎರಡು ಏಟು ಬಿಗಿದಳು ಭಾಗ್ಯ: ಭಾಗ್ಯಲಕ್ಷ್ಮೀ ಧಾರಾವಾಹಿ

ಶ್ರೇಷ್ಠಾ ಕೆನ್ನೆಗೆ ಎರಡು ಏಟು ಬಿಗಿದ ಭಾಗ್ಯ
ಮಾರುಕಟ್ಟೆಯಲ್ಲಿ ಛೇಡಿಸಿದ ಶ್ರೇಷ್ಠಾ, ಅಷ್ಟಕ್ಕೇ ಸುಮ್ಮನಾಗದೇ, ನಿನ್ನ ಮಾಂಗಲ್ಯ ಮಾರಿಬಿಡು, ಅದರಿಂದ ದುಡ್ಡು ಸಿಗುತ್ತದೆ, ಅದರಲ್ಲಿ ಆರಾಮವಾಗಿರಬಹುದು ಎಂದು ಭಾಗ್ಯ ಮಾಂಗಲ್ಯ ಎತ್ತಿಕೊಳ್ಳುತ್ತಾಳೆ. ಆಗ ಕೋಪಗೊಂಡ ಭಾಗ್ಯ, ಇದು ಅಗ್ನಿಸಾಕ್ಷಿಯಾಗಿ ನನ್ನ ಗಂಡ ಕಟ್ಟಿರುವ ತಾಳಿ, ಮುತ್ತೈದೆಯ ಸಂಕೇತ ಎಂದು ಹೇಳಿ, ಶ್ರೇಷ್ಠಾ ಕೆನ್ನೆಗೆ ಎರಡು ಏಟು ಬಿಗಿಯುತ್ತಾಳೆ. ಭಾಗ್ಯ ಅವತಾರ ಕಂಡು ಶ್ರೇಷ್ಠಾ ದಂಗಾಗುತ್ತಾಳೆ. ಅಲ್ಲದೆ, ಮಾರುಕಟ್ಟೆಯಲ್ಲಿ ಇದ್ದವರು ಎಲ್ಲರೂ, ಭಾಗ್ಯಗೆ ಬೆಂಬಲ ವ್ಯಕ್ತಪಡಿಸುತ್ತಾರೆ, ಮೂರನೇಯವಳು ಎಂದು ಶ್ರೇಷ್ಠಾಗೆ ಎಲ್ಲರೂ ಅವಮಾನ ಮಾಡುತ್ತಾರೆ. ಒಂದೆಡೆ ಏಟು ತಿಂದ ನೋವು, ಇನ್ನೊಂದೆಡೆ ಎಲ್ಲರೆದುರು ಅವಮಾನ ತಾಳಲಾರದೆ, ಶ್ರೇಷ್ಠಾ ಅಲ್ಲಿಂದ ಹೋಗುತ್ತಾಳೆ. ದಾರಿಯಲ್ಲಿ ಶೌರ್ಯನಿಗೆ ಫೋನ್ ಮಾಡಿ, ನನಗೆ ಇವತ್ತೇ ತಾಂಡವ್ ಜತೆ ಮದುವೆಯಾಗಬೇಕು ಎಂದು ಹೇಳುತ್ತಾಳೆ. ಅಲ್ಲಿಗೆ ಫೆಬ್ರುವರಿ 21ರ ಸಂಚಿಕೆ ಕೊನೆಯಾಗಿದೆ. ಪ್ರಸ್ತುತ ಭಾಗ್ಯಲಕ್ಷ್ಮಿ ಧಾರಾವಾಹಿ 723ನೇ ಸಂಚಿಕೆ ಮುಗಿಸಿದೆ. ಒಂದೆಡೆ ಭಾಗ್ಯ ಹಣಕಾಸಿನ ಸಮಸ್ಯೆ ಎದುರಿಸುತ್ತಿದ್ದಾಳೆ, ಮತ್ತೊಂದೆಡೆ ಕನ್ನಿಕಾ ಅವಳ ಕೆಲಸ ಕಸಿಯಲು ಮುಂದಾಗಿದ್ದಾಳೆ. ಹೀಗಾಗಿ ಭಾಗ್ಯ ಮುಂದೇನು ಮಾಡುತ್ತಾಳೆ ಎಂದು ಮುಂದಿನ ಸಂಚಿಕೆಯಲ್ಲಿ ತಿಳಿಯಬೇಕಿದೆ.