Latest Kannada Nation & World
ಮಾಧ್ಯಮಗಳ ಮೂಗುದಾರ ಹಿಡಿದ ಚುನಾವಣಾ ಆಯೋಗ; ಮತದಾನ ದಿನ ಸಂಜೆ 6.30ರವರೆಗೆ ಎಕ್ಸಿಟ್ ಪೋಲ್‌ಗೆ ನಿಷೇಧ

ನವದೆಹಲಿ: ದೆಹಲಿ ವಿಧಾನಸಭಾ ಚುನಾವಣಾ ಕಣ ರಂಗೇರಿದ್ದು, ಈ ನಡುವೆ ಭಾರತೀಯ ಚುನಾವಣಾ ಆಯೋಗವು ಮಾಧ್ಯಮಗಳಿಗೆ ಮೂಗುದಾರ ಹಾಕಲು ಮುಂದಾಗಿದೆ. ಮತದಾನದ ದಿನವಾದ ಫೆಬ್ರುವರಿ 5ರಂದು ಸಂಜೆ 6.30ರವರೆಗೆ ಚುನಾವಣೋತ್ತರ ಸಮೀಕ್ಷೆಗಳ (exit polls) ಫಲಿತಾಂಶ ಬಿಡುಗಡೆಗೆ ಚುನಾವಣಾ ಆಯೋಗ ನಿಷೇಧ ಹೇರಿದೆ. ಎಕ್ಸಿಟ್ ಪೋಲ್ ಫಲಿತಾಂಶದ ನಿಖರತೆಯ ಬಗ್ಗೆ ಹೆಚ್ಚುತ್ತಿರುವ ಕಳವಳಗಳ ನಡುವೆ, ಚುನಾವಣಾ ಪ್ರಕ್ರಿಯೆಯ ಸಮಗ್ರತೆಯನ್ನು ಕಾಪಾಡಿಕೊಳ್ಳುವ ಉದ್ದೇಶ ಆಯೋಗದ್ದು. ಹೀಗಾಗಿ ಈ ಮಹತ್ವದ ನಿರ್ಧಾರ ಹೊರಬಂದಿದೆ.