Latest Kannada Nation & World
ಟಿಆರ್‌ಪಿಯಲ್ಲಿ ಕಿಚ್ಚ ವರ್ಸಸ್ ಕಿಚ್ಚ! ಬಿಗ್ ಬಾಸ್‌ಗೆ ಟಕ್ಕರ್ ಕೊಟ್ಟ ಸರಿಗಮಪ ಶೋ

ಕಳೆದ ಎರಡು ವಾರಗಳ ಹಿಂದೆ ಅಂದರೆ, ಜನವರಿ 4 ಮತ್ತು 5ರಂದು ಜೀ ಕನ್ನಡದಲ್ಲಿ ಸರಿಗಮಪ ಶೋಗೆ ಕಿಚ್ಚ ಸುದೀಪ್ ಎಂಟ್ರಿ ಕೊಟ್ಟಿದ್ದರು. ಮ್ಯಾಕ್ಸ್ ಸಿನಿಮಾ ಬಿಡುಗಡೆ ಹಿನ್ನೆಲೆಯಲ್ಲಿ ಸರಿಗಮಪ ಶೋನಲ್ಲಿ ಮಹಾವೇದಿಕೆ ಹೆಸರಲ್ಲಿ ವಿಶೇಷ ಸಂಚಿಕೆ ಪ್ರಸಾರ ಕಂಡಿತ್ತು. ಕಿಚ್ಚ ಸುದೀಪ್ ಮಾತ್ರವಲ್ಲದೆ, ಪತ್ನಿ ಪ್ರಿಯಾ, ಮಗಳು ಸಾನ್ವಿ ಸಹ ಭಾಗವಹಿಸಿದ್ದರು. ಬರೋಬ್ಬರಿ ಎರಡು ದಿನದ ವಾರಾಂತ್ಯದ ಏಪಿಸೋಡ್‌ಗೆ ದೊಡ್ಡ ಮಟ್ಟದ ಮೆಚ್ಚುಗೆ ವ್ಯಕ್ತವಾಗಿತ್ತು. ಹಾಡು, ಕುಣಿತ, ನೆನಪು, ಸೇರಿ ಭಾವುಕ ಕ್ಷಣಗಳಿಗೆ ಸರಿಗಮಪ ಶೋ ಸಾಕ್ಷಿಯಾಗಿತ್ತು.