Latest Kannada Nation & World
ಮಾವ ಧರ್ಮರಾಜ್‌ಗೆ ಕಾರು ಕೊಡಿಸಲು ಮುಂದಾದ ಭಾಗ್ಯಾ, ಅದಕ್ಕೂ ಕೊಂಕು ಮಾತನಾಡಿದ ತಾಂಡವ್; ಭಾಗ್ಯಲಕ್ಷ್ಮೀ ಧಾರಾವಾಹಿ

ಊರು ಸುತ್ತಲು ಹೋಗಿದ್ಯಾ ಎಂದು ತಾಂಡವ್ ಕೇಳುತ್ತಾನೆ. ನಾನು ಊರು ಸುತ್ತೋಕೆ ಆದ್ರೂ ಹೋಗುವೆ, ಕಾಡು ಸುತ್ತೋಕಾದ್ರೂ ಹೋಗುತ್ತೇನೆ, ಅದನೆಲ್ಲಾ ನೀವು ಏಕೆ ಕೇಳುತ್ತೀರಿ ಎಂದು ಭಾಗ್ಯಾ ಗಂಡನಿಗೆ ಉತ್ತರಿಸುತ್ತಾಳೆ. ನನಗೆ ನಿಮ್ಮ ಬಳಿ ಮಾತನಾಡಲು ಏನಿಲ್ಲ, ಮಾವ ನಿಮ್ಮ ಬಳಿ ಮಾತನಾಡಬೇಕು ಬನ್ನಿ ಎಂದು ಧರ್ಮರಾಜ್‌ನನ್ನು ಕೂರಿಸಿ, ಕೈಯಲ್ಲಿರುವ ಫೋಟೋಗಳನ್ನು ಮಾವನ ಮುಂದೆ ಇಡುತ್ತಾಳೆ. ನಿಮಗೆ ನಾನು ಕಾರು ಕೊಡಿಸಬೇಕು ಎಂದುಕೊಂಡಿದ್ದೇನೆ, ಇಲ್ಲಿರುವ ಮಾಡೆಲ್‌ಗಳಲ್ಲಿ ನಿಮಗೆ ಯಾವುದು ಇಷ್ಟ ನೋಡಿ ಹೇಳಿ ಎನ್ನುತ್ತಾಳೆ. ಇದನ್ನು ಕೇಳಿ ತಾಂಡವ್ ಶಾಕ್ ಆಗುತ್ತಾನೆ, ಕಾರು ಕೊಡಿಸುವುದು ಸುಲಭದ ಮಾತಲ್ಲ, ಅದಕ್ಕೂ ಇಎಂಐ ಕಟ್ಟಬೇಕು, ಇದೆಲ್ಲಾ ಎಷ್ಟು ದಿನ ಅಂತ ನಾನೂ ನೋಡುತ್ತೇನೆ ಎಂದು ಅಲ್ಲಿಂದ ಹೋಗುತ್ತಾನೆ. ಸೊಸೆಯ ಪ್ರೀತಿ ಕಂಡು ಕುಸುಮಾ, ಧರ್ಮರಾಜ್ ಖುಷಿಯಾಗುತ್ತಾರೆ.