ಟ್ರೋಲ್ ಮಾಡಿದವರಿಗೆ ಪ್ರತಿಕ್ರಿಯಿಸಿ ಮತ್ತೆ ಟ್ರೋಲ್ ಆದ ನಟ ಜಗ್ಗೇಶ್; ಆನೆ ಆಗೋಕೆ ಮಾತ್ರವಲ್ಲ ಶ್ವಾನ ಆಗೋಕೂ ಯೋಗ, ಯೋಗ್ಯತೆ ಬೇಕು ಎಂದ ಜನ

ಶ್ವಾನ ಆಗಲೂ ಯೋಗ್ಯತೆ ಬೇಕು ಎಂದ ಜನರು
ಈ ರೀತಿ ಟ್ವೀಟ್ ಮಾಡಿ ಇದೀಗ ಜಗ್ಗೇಶ್ ಮತ್ತೆ ಟ್ರೋಲ್ ಆಗುತ್ತಿದ್ದಾರೆ. ಜಗ್ಗೇಶ್ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ನೆಟಿಜನ್ಸ್, ಆದರೂ ಸತ್ತವರ ಬಗ್ಗೆ ಕೆಟ್ಟದಾಗಿ ಮಾತಾಡೋದು ತಪ್ಪಲ್ಲವೇ ಅಣ್ಣ? ರೀ ಸ್ವಾಮಿ ನಿಮಗೆ ಏನು ನೈತಿಕತೆ ಇದೆ ಅಂತ ಗುರುಪ್ರಸಾದ್ ಅವರ ಬಗ್ಗೆ, ಅದು ಸತ್ತಿರುವ ವ್ಯಕ್ತಿಯ ಬಗ್ಗೆ ಮಾತಾಡುತ್ತೀರಿ..?, ಸರ್ ನಿಮ್ಮ ಚಲನಚಿತ್ರಗಳನ್ನ ನೋಡಿ ನಕ್ಕು ಬೆಳೆದವರು ನಾವು! ನಾನು ಸಹ ನಿಮ್ಮ ಹಾಸ್ಯದ ಟೈಮಿಂಗಿನ ಅಭಿಮಾನಿ! ನಿಮ್ಮ ಹೇಳಿಕೆಗಳು ನಿಜವಿರಬಹುದು, ಆದರೆ ಈ ಬಾರಿ ಟೈಮಿಂಗ್ ಸರಿಯಿಲ್ಲ! ಬಹಳಷ್ಟು ಜನ ನಿಮ್ಮ ಬಗ್ಗೆ ವ್ಯಂಗ್ಯ ಮಾಡ್ತಾ ಇರೋರು ಟೀಕಿಸುತ್ತಿರುವವರು ಸಹ ಚಿಕ್ಕ ಹುಡುಗರೇ! ಚಿಕ್ಕ ಹುಡುಗರ ಮಾತಿಗೆ ಬೇಸರಗೊಂಡು, ಬ್ಲಾಕ್ ಮಾಡುವುದನ್ನು ನಿಲ್ಲಿಸಿ! Take a break! Find some peace!ರಾಯರು ಎಲ್ಲರಿಗೂ ಒಳ್ಳೇದ್ ಮಾಡ್ಲಿ, ಜಗ್ಗಣ್ಣ ಇಲ್ಲಿ ಆನೆ ಯಾರು, ಶ್ವಾನ ಯಾರು? ಆನೆ ಆಗೋಕೂ, ಶ್ವಾನ ಆಗೋಕೂ ಯೋಗ್ಯತೆ ಬೇಕು. ನಿಮಗೆ ಆನೆ ಗಾಂಭೀರ್ಯನೂ ಇಲ್ಲ, ಶ್ವಾನದ ನಿಯತ್ತು ಇಲ್ಲ ನೀವು ಎಲ್ಲಂದ್ರಲ್ಲಿ ಲದ್ದಿ ಹಾಕ್ತಿರಾ, ಎಲ್ಲಂದ್ರಲ್ಲಿ ಬೊಗುಳ್ತೀರ ಅಷ್ಟೇ. ಅದ್ಕೆ scientific ಕಾರಣ “ಸಂಸ್ಕಾರ ಇಲ್ದಿರೋದು”