Latest Kannada Nation & World
ಮುನ್ನಾರ್ಗೆ ಪ್ರವಾಸ ಹೋದ್ರೆ ಡಬಲ್ ಡೆಕ್ಕರ್ ಬಸ್ನಲ್ಲಿ ಪ್ರಯಾಣ ಮಾಡೋದು ಮರಿಬೇಡಿ; ಖಂಡಿತ ಸ್ವರ್ಗ ಕಾಣ್ತೀರಿ

ಬಸ್ ಪ್ರಯಾಣದ ವಿವರ
ಮುನ್ನಾರ್ ಬಸ್ ನಿಲ್ದಾಣದಿಂದ ಅನೈರಂಗಲ್ ನಡುವೆ ಮೂರು ಗಂಟೆಗಳ ಪ್ರಯಾಣವಿದೆ. ಮಾರ್ಗ ಮಧ್ಯದಲ್ಲಿ 5 ಮಧ್ಯಂತರ ನಿಲ್ದಾಣಗಳು ಬರುತ್ತವೆ. ಈ ಬಸ್ನಲ್ಲಿ ಪ್ರಯಾಣ ಮಾಡುವವರು ಕಣ್ಣನ್ ದೇವನ್ ಟೀ ಎಸ್ಟೇಟ್ಗಳು, ಮಲೈಕಲ್ಲನ್ ರಾಕ್ ಗುಹೆ, ಸಿಗ್ನಲ್ ಪಾಯಿಂಟ್, ಪೆರಿಯಕನಾಲ್ ಜಲಪಾತ, ಲಾಕ್ಹಾರ್ಟ್ ಎಸ್ಟೇಟ್ ವ್ಯೂ, ಚೋಕ್ರಮಲ ಬೆಟ್ಟ, ಆರೆಂಜ್ ಫಾರ್ಮ್ ಮತ್ತು ಅನೈರಂಗಲ್ ಅಣೆಕಟ್ಟ ಈ ಎಲ್ಲವನ್ನೂ ಎಂಜಾಯ್ ಮಾಡಬಹುದು. ಈ ಡಬ್ಬಲ್ ಡೆಕ್ಕರ್ ಬಸ್ನಲ್ಲಿ ಮೇಲಿನ ಡೆಕ್ನ ಪ್ರತಿ ಸೀಟಿಗೆ 400 ರೂ ಹಾಗೂ ಕೆಳಗಿನ ಸೀಟ್ ಪ್ರತಿ ಸೀಟಿಗೆ 200 ರೂ ನಿಗದಿ ಮಾಡಲಾಗಿದೆ. ಮೇಲ್ಭಾಗದಲ್ಲಿ 38 ಸೀಟುಗಳು ಮತ್ತು ಕೆಳಗಿನ ಡೆಕ್ನಲ್ಲಿ 12 ಸೀಟುಗಳಿವೆ. ಬೆಳಿಗ್ಗೆ 9, ಮಧ್ಯಾಹ್ನ 12.30 ಮತ್ತು ಸಂಜೆ 4 ಈ ಮೂರು ಸಮಯದಲ್ಲಿ ಬಸ್ ವ್ಯವಸ್ಥೆ ಇರುತ್ತದೆ.