Astrology
ಮೂರು ಶುಭ ಯೋಗಗಳಲ್ಲಿ ಗೋವರ್ಧನ ಪೂಜೆ; ಇಡೀ ವರ್ಷ ಉತ್ತಮ ಫಲಗಳಿಗಾಗಿ ಶ್ರೀಕೃಷ್ಣನನ್ನ ಹೀಗೆ ಆರಾಧಿಸಿ

ಪೂಜೆಯ ವಿಧಾನ
ಗೋವರ್ಧನ ಪೂಜೆಯ ದಿನದಂದು, ಶ್ರೀಕೃಷ್ಣ ಮತ್ತು ಗೋವರ್ಧನ ಪರ್ವತವನ್ನು ಪೂಜಿಸಲು ಜನರು ಒಂದೇ ಸ್ಥಳದಲ್ಲಿ ಸೇರುತ್ತಾರೆ. ಬೆಳಿಗ್ಗೆ ಎದ್ದ ನಂತರ, ಗೋವರ್ಧನ ಪರ್ವತವನ್ನು ಕೈಯಲ್ಲಿ ಹಿಡಿದಿರುವ ಶ್ರೀಕೃಷ್ಣನ ಫೋಟೊಗೆ ಪೂಜೆ ಮಾಡಲಾಗುತ್ತದೆ. ಮುಂಜಾನೆ ಎದ್ದು ಮನೆಯ ಮುಖ್ಯ ದ್ವಾರದಲ್ಲಿ ಗೋವಿನ ಸಗಣಿಯಿಂದ ಗೋವರ್ಧನನ ವಿಗ್ರಹವನ್ನು ಮಾಡಿ, ಗೋವು, ಗೋವಿನ ಕೂದಲು, ಅಕ್ಕಿ, ಹೂವು, ಮೊಸರು, ಎಣ್ಣೆ ಮತ್ತು ನೀರಿನಿಂದ ಮಾಡಿದ ದೀಪವನ್ನು ಬೆಳಗಿಸಿ ಶ್ರೀಕೃಷ್ಣನನ್ನು ಪೂಜಿಸಬೇಕು.