Astrology
ಮೇಲುಕೋಟೆ ಚೆಲುವನಾರಾಯಣಸ್ವಾಮಿಗೆ ವೈರಮುಡಿಗೆ ಮುನ್ನ ಪ್ರಥಮ ತೆಪ್ಪೋತ್ಸವ ಸಂಪನ್ನ, ನಾಳೆಯಿಂದ 14ರ ವರೆಗೆ ವೈರಮುಡಿ ಜಾತ್ರಾ ಮಹೋತ್ಸವ

ಚೆಲುವನಾರಾಯಣಸ್ವಾಮಿಗೆ ವೈರಮುಡಿ ಬ್ರಹ್ಮೋತ್ಸವಕ್ಕೆ ಮುನ್ನ ತೆಪ್ಪೋತ್ಸವ
ಮೇಲುಕೋಟೆ ಚೆಲುವಾರಾಯಸ್ವಾಮಿ ದೇವಸ್ಥಾನಕ್ಕೆ ಸೋಮವಾರ ಪಾಂಡವಪುರ ಖಜಾನೆಯಿಂದ ತಂದ ಅಮೂಲ್ಯ ಮುತ್ತುಮುಡಿ ಮುತ್ತಗಳ ಹಾರಗಳನ್ನು ಚೆಲುವನಾರಾಯಣಸ್ವಾಮಿಗೆ ಅಲಂಕರಿಸಿ ಸಂಜೆ ವೈಭವದ ಉತ್ಸವ ನೆರವೇರಿಸಲಾಯಿತು. ಮಹೂರ್ತಪಠಣದ ನಂತರ ತೆಪ್ಪಮಂಟಪದಲ್ಲಿ ಚೆಲುವನಾರಾಯಣಸ್ವಾಮಿ ಮತ್ತು ರಾಮಾನುಜಾಚಾರ್ಯರನ್ನು ಪ್ರತಿಷ್ಠಾಪಿಸಿ ತೆಪ್ಪೋತ್ಸವಕ್ಕೆ ಚಾಲನೆ ನೀಡಲಾಯಿತು. ಕಲ್ಯಾಣಿಯಲ್ಲಿ ಇದ್ದ ಅಲಂಕೃತ ತೆಪ್ಪದಲ್ಲಿ ದೇವರನ್ನು ಕೂರಿಸಿ ಮೂರು ಪ್ರದಕ್ಷಿಣೆ ಹಾಕಿ ಪ್ರಥಮ ತೆಪ್ಪೋತ್ಸವ ಆಚರಿಸಲಾಗಿದ್ದು, ರಾತ್ರಿ 8 ಗಂಟೆಗೆ ಸಂಪನ್ನವಾಯಿತು. ತೆಪ್ಪೋತ್ಸವಕ್ಕೆ ಮುನ್ನ ವಿದ್ವಾನ್ ಆನಂದ್ ತಂಡ ನಾದಸ್ವರ ನುಡಿಸಿ ಉತ್ಸವಕ್ಕೆ ಮೆರಗು ನೀಡಿತು. ತೆಪ್ಪೋತ್ಸವದ ಅಂಗವಾಗಿ ಕಲ್ಯಾಣಿಯಲ್ಲಿ ಅಚ್ಚುಕಟ್ಟಾಗಿ ಶುಚಿತ್ವ ಕಾಪಾಡುವ ಜೊತೆಗೆ ಸರಳ ದೀಪಾಲಂಕಾರ ಮಾಡಿದ್ದು ಭಕ್ತರಿಗೆ ಮುದ ನೀಡಿತ್ತು