Latest Kannada Nation & World
ಮ್ಯಾನ್ಮಾರ್ ಭೂಕಂಪ ನೆನಪಿಸಿದ ಜಗತ್ತಿನ ಅತ್ಯಂತ ಭೀಕರ ಭೂಕಂಪಗಳು; ಚಿಲಿ ಭೂಕಂಪದಿಂದ ಸುಮಾತ್ರ ಸುನಾಮಿವರೆಗೆ

ಚಿಲಿ ಭೂಕಂಪ: ಚಿಲಿಯಲ್ಲಿ 1960ರಲ್ಲಿ ಅತ್ಯಂತ ಭೀಕರ ಭೂಕಂಪ ಸಂಭವಿಸಿತ್ತು. ವಾಲ್ಡಿವಿಯಾ ಮತ್ತು ಪೋರ್ಟೊ ಮಾಂಟ್ ಪ್ರದೇಶಗಳಲ್ಲಿ ಸಂಭವಿಸಿದ್ದ ಈ ಭೂಕಂಪನದ ತೀವ್ರತೆಯು ರಿಕ್ಟರ್ ಮಾಪಕದಲ್ಲಿ 9.5 ರಷ್ಟು ದಾಖಲಾಗಿತ್ತು. ಇದರಲ್ಲಿ ಕನಿಷ್ಠ 16 ಸಾವಿರ ಜನರು ಪ್ರಾಣ ಕಳೆದುಕೊಂಡರು. ಈ ಭೂಕಂಪದಿಂದಾಗಿ, ಹವಾಯಿಯಲ್ಲಿ 61 ಜನರು, ಜಪಾನ್‌ನಲ್ಲಿ 138 ಮತ್ತು ಫಿಲಿಪೈನ್ಸ್‌ನಲ್ಲಿ 32 ಜನರು ಸಾವನ್ನಪ್ಪಿದರು. 20 ಲಕ್ಷಕ್ಕೂ ಹೆಚ್ಚು ಜನರು ನಿರಾಶ್ರಿತರಾದರು. ಭೂಕಂಪದ ಪರಿಣಾಮವಾಗಿ ಸುನಾಮಿಯ ಅಲೆಗಳು ಎದ್ದವು, ಅದು ಜಪಾನ್, ಹವಾಯಿ ಮತ್ತು ಫಿಲಿಪೈನ್ಸ್‌ನ ಕರಾವಳಿ ಪ್ರದೇಶಗಳನ್ನು ಧ್ವಂಸಮಾಡಿತು.