Astrology
ಯಡಿಯೂರು ಶ್ರೀಸಿದ್ದಲಿಂಗೇಶ್ವರ ಸ್ವಾಮಿ ರಥೋತ್ಸವ ಸಂಪನ್ನ, ವಿವಿಧೆಡೆಯಿಂದ ಆಗಮಿಸಿದ ಅಪಾರ ಭಕ್ತ ಸಾಗರ

ಹಾ ರಥೋತ್ಸವದ ನಂತರ ಅನ್ನ ದಾಸೋಹ
ರಥೋತ್ಸವ ಸಾಗುವ ದೇವಾಲಯದ ಮುಂಬದಿಯ ರಥ ಬೀದಿಯಲ್ಲಿ ಭಕ್ತರಿಗೆ ಬಿಸಿಲಿನ ಬೇಗೆಯ ಭಾದೆ ಆಗದಂತೆ ಮೂರಕ್ಕೂ ಹೆಚ್ಚು ಟ್ಯಾಂಕರ್‌ಗಳಿಂದ ನೀರು ಹಾಕುವ ಮೂಲಕ ರಥ ಬೀದಿಯನ್ನು ತಂಪುಗೊಳಿಸುವ ವ್ಯವಸ್ಥೆ ಮಾಡಲಾಗಿತ್ತು. ದೇವಾಲಯದ ಭಕ್ತರು, ಯಡಿಯೂರಿನ ನಾಗರಿಕರು, ಶ್ರೀಕ್ಷೇತ್ರಕ್ಕೆ ಬರುವ ಭಕ್ತರ ದಾಹ ತಣಿಸಲು ರಸ್ತೆಯ ಇಕ್ಕೆಲಗಳ ಪ್ರಮುಖ ಕಡೆಗಳಲ್ಲಿ ನೀರು ಮಜ್ಜಿಗೆ, ಪಾನಕ, ಹೆಸರು ಬೇಳೆ ಅರವಟ್ಟಿಗೆ ಸ್ಥಾಪಿಸಿ ವಿತರಿಸಿದ್ದು, ಮಹಾ ರಥೋತ್ಸವದ ನಂತರ ಅನ್ನ ದಾಸೋಹ ನೆರವೇರಿಸಿದರು.