Astrology
ಡಿಸೆಂಬರ್ ನಲ್ಲಿ ಸಂಕಷ್ಟ ಚತುರ್ಥಿ ಯಾವಾಗ? ದಿನಾಂಕ, ಮುಹೂರ್ತ, ಪೂಜಾ ವಿಧಾನ ತಿಳಿಯಿರಿ

ಡಿಸೆಂಬರ್ ತಿಂಗಳ ಸಂಕಷ್ಟ ಚತುರ್ಥಿ: ಹಿಂದೂ ಕ್ಯಾಲೆಂಡರ್ ಪ್ರಕಾರ, ಸಂಕಷ್ಟ ಚತುರ್ಥಿಯನ್ನು ಪ್ರತಿ ತಿಂಗಳಿಗೊಮ್ಮೆ ಆಚರಿಸಲಾಗುತ್ತದೆ. ಇದು ಸಂಕಷ್ಟಹರ ಗಣಪತಿಗೆ ಸಮರ್ಪಿತವಾಗಿರುತ್ತದೆ. ಡಿಸೆಂಬರ್ ತಿಂಗಳಲ್ಲಿ ಬರುವ ಸಂಕಷ್ಟ ಚತುರ್ಥಿಯನ್ನು ಅಖುರ್ತ ಸಂಕಷ್ಟಿ ಚತುರ್ಥಿ ಎಂದು ಕರೆಯಲಾಗುತ್ತದೆ. ಅಖುರ್ತ ಸಂಕಷ್ಟ ಚತುರ್ಥಿಯ ದಿನದಂದು, ಗಣಪತಿಯನ್ನು ಪೂರ್ಣ ಪದ್ಧತಿಗಳಿಂದ ಪೂಜಿಸಲಾಗುತ್ತದೆ. ಗಣೇಶನ ಆಶೀರ್ವಾದ ಪಡೆಯಲು ಅನೇಕರು ಅಂದು ಉಪವಾಸವನ್ನು ಆಚರಿಸುತ್ತಾರೆ. ಚಂದ್ರನನ್ನು ನೋಡಿದ ನಂತರವೇ ಉಪವಾಸನ್ನು ಮುಕ್ತಾಯ ಮಾಡುತ್ತಾರೆ. ಡಿಸೆಂಬರ್ ತಿಂಗಳಲ್ಲಿ ಬರುವ ಸಂಕಷ್ಟ ಚತುರ್ಥಿಯ ನಿಖರವಾದ ದಿನಾಂಕ, ಮುಹೂರ್ತ, ಪೂಜಾ ವಿಧಾನ ಮತ್ತು ಚಂದ್ರೋದಯ ಸಮಯವನ್ನು ತಿಳಿಯೋಣ.