Latest Kannada Nation & World
ಕ್ಯಾನ್ಸರ್ ಚಿಕಿತ್ಸೆ ಪಡೆದು ಮರಳಿದ ನಟ ಶಿವರಾಜ್ ಕುಮಾರ್ ಮನೆಗೆ ಸಿಎಂ ಸಿದ್ದರಾಮಯ್ಯ ಭೇಟಿ, ಆರೋಗ್ಯ ವಿಚಾರಣೆ

ಮೂತ್ರಕೋಶದ ಕ್ಯಾನ್ಸರ್‌ಗೆ ಚಿಕಿತ್ಸೆ
ಮೂತ್ರಕೋಶದ ಕ್ಯಾನ್ಸರ್ ಟ್ರೀಟ್‌ಮೆಂಟ್‌ಗೆ ಕಳೆದ ತಿಂಗಳು ಅಮೆರಿಕಾಕ್ಕೆ ಹೋಗಿದ್ದ ಶಿವಣ್ಣ, ಈ ವರ್ಷದ ಮೊದಲ ದಿನವೇ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದರು. ನಾನೀಗ ಕ್ಯಾನ್ಸರ್ ಫ್ರೀ. ಎಲ್ಲ ವರದಿಗಳೂ ನೆಗೆಟಿವ್ ಬಂದಿವೆ. ಒಂದು ತಿಂಗಳ ಕಾಲ ರೆಸ್ಟ್ ಮಾಡಿ, ಮಾರ್ಚ್ ವೇಳೆಗೆ ಮತ್ತೆ ನಿಮ್ಮ ಎನರ್ಜಿಟಿಕ್ ಶಿವಣ್ಣ ಕಾಣಿಸಿಕೊಳ್ಳಲಿದ್ದಾರೆ ಎಂದಿದ್ದರು. ಈಗ ಅಂದುಕೊಂಡಂತೆ, ಯಶಸ್ವಿ ಚಿಕಿತ್ಸೆ ಬಳಿಕ ತಾಯ್ನಾಡಿಗೆ ಮರಳಿದ್ದಾರೆ.