Latest Kannada Nation & World
ಯುಗಾದಿ ಹಬ್ಬದ ದಿನ ನಾಗಪುರದಲ್ಲಿ ಸಂಘ ಕಚೇರಿಗೆ ಭೇಟಿ ನೀಡಿದ ಪ್ರಧಾನಿ ಮೋದಿ, ಅಂಬೇಡ್ಕರ್‌ಗೂ ಪುಷ್ಪನಮನ; ಆರ್‌ಎಸ್‌ಎಸ್ ಶತಮಾನೋತ್ಸವ ವರ್ಷ

ಆರ್‌ಎಸ್‌ಎಸ್ ಶತಮಾನೋತ್ಸವ ವರ್ಷ; ಸಂಘದ ಕೇಂದ್ರ ಕಚೇರಿಯಲ್ಲಿ ಪಿಎಂ ಮೋದಿ
ರಾಷ್ಡ್ರೀಯ ಸ್ವಯಂಸೇವಕ ಸಂಘ ಅಥವಾ ಆರ್‌ಎಸ್‌ಎಸ್ ಶತಮಾನೋತ್ಸವ ವರ್ಷ ಇದಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಈ ಸಲದ ಯುಗಾದಿ ಹಬ್ಬವನ್ನು ಸಂಘದ ಕೇಂದ್ರ ಕಚೇರಿಯಲ್ಲೇ ಆಚರಿಸಿದರು. ಈ ಸಂದರ್ಭದಲ್ಲಿ ಅವರು ಸಂಘ ಸಂಸ್ಥಾಪಕ ಡಾ ಹೆಡ್ಗೇವಾರ್, ಎರಡನೇ ಸರಸಂಘ ಚಾಲಕ ಮಾಧವ್ ಸದಾಶಿವರಾವ್ ಗೋಲ್ವಾಲ್ಕರ್ ಅವರ ಸ್ಮಾರಕಕ್ಕೆ ತೆರಳಿ ಪುಷ್ಪ ನಮನ ಸಲ್ಲಿಸಿದರು.