Latest Kannada Nation & World
ಯುವರಾಣಿ ಕಂಡಲ್ಲಿ ನಮಸ್ಕಾರ ಮಾಡಲ್ಲ ಎಂದ ಗೌತಮಿ; ಉಗ್ರಂ ಮಂಜು ಮೋಕ್ಷಿತಾ ನಡುವೆ ಕಿರಿಕ್

ಸುರೇಶ್ ಅವರು ಆಟದ ನಿಯಮವನ್ನು ಹೇಳಿದರೂ ಸಹ ಗೌತಮಿ ಮಾತ್ರ ಇದಕ್ಕೆಲ್ಲ ಒಪ್ಪಿಕೊಂಡಿಲ್ಲ. ಯುವರಾಣಿ ಕಂಡಾಗೆಲ್ಲ ನೀವು ತಲೆ ಬಾಗಿ ನಮಸ್ಕಾರ ಮಾಡಬೇಕಂತೆ ಎಂದು ಸುರೇಶ್ ಅವರು ಹೇಳುತ್ತಾರೆ. ಆದರೆ ಗೌತಮಿ ಇಲ್ಲ ನಾನು ಹಾಗೆಲ್ಲ ತಲೆಬಾಗೋದಿಲ್ಲ. ಯಾವತ್ತು ನಾನು ಅವರಿಗೆ ತಲೆ ಬಾಗಿದೆನೋ, ಅವತ್ತು ನಾನು ಅವರು ಹೇಳಿದ್ದನ್ನು ಕೇಳಿದೆ ಎಂದಾಗುತ್ತದೆ. ಆ ಕಾರಣಕ್ಕಾಗಿ ನಾನು ತಲೆ ಬಾಗೋದಿಲ್ಲ ಎಂದು ಹೇಳುತ್ತಾಳೆ.