Latest Kannada Nation & World
ರವೀಂದ್ರ ಜಡೇಜಾಗೆ ಎಚ್ಚರಿಕೆ ನೀಡದ ಅಂಪೈರ್ ವಿರುದ್ಧ ಕಾಮೆಂಟೇಟರ್ ಸೈಮನ್ ಡೌಲ್ ಕಿಡಿ; ಏನಿರಬಹುದು ಕಾರಣ?

ಪಿಚ್ ಮಧ್ಯೆ ಓಡಿದ ಜಡೇಜಾ
ನ್ಯೂಜಿಲೆಂಡ್ ಬ್ಯಾಟರ್ ಲಾಥಮ್ ಅವರು ರಿವರ್ಸ್ ಸ್ವೀಪ್ ಮಾಡಲು ಪ್ರಯತ್ನಿಸಿದರು. ಆದರೆ, ಚೆಂಡು ಅವರ ಹಿಂಭಾಗದ ತೊಡೆಗೆ ತಗುಲಿದ ಕಾರಣ ಎಲ್ಬಿಡಬ್ಲ್ಯು ಆದರು. ಲಾಥಮ್ ರಿವಿವ್ಯೂ ಕೂಡ ತೆಗೆದುಕೊಳ್ಳಲಿಲ್ಲ. ಬೌಲರ್ ಮನವಿ ಮಾಡಿದ ಬೆನ್ನಲ್ಲೇ ಅಂಪೈರ್ ತಕ್ಷಣ ಔಟ್ ಕೊಟ್ಟರು. ವಿಕೆಟ್ ಪಡೆದು ಸಂಭ್ರಮಿಸಿದ ವೇಳೆ ಜಡೇಜಾ, ಪಿಚ್ ಮಧ್ಯದಲ್ಲಿ ಓಡಿದರು. ಈ ಬಗ್ಗೆ ಮಾಜಿ ಆಟಗಾರ ಸೈಮನ್ ಡೌಲ್ ಅಸಮಾಧಾನ ಹೊರ ಹಾಕಿದರು. ಅವರನ್ನು ನೋಡಿ. ಹಾಗೆ ಮಾಡುವಂತಿಲ್ಲ. ಅಂಪೈರ್ಸ್ ಎಚ್ಚರಿಸಬೇಕಿತ್ತು ಎಂದಿದ್ದಾರೆ. ಪಿಚ್ ಮಧ್ಯೆ ಕಾಲಿಟ್ಟರೆ ಆಟಗಾರರಿಗೆ ವಾರ್ನಿಂಗ್ ಮಾಡಬೇಕು.