ಸೃಷ್ಟಿಕರ್ತ ಬ್ರಹ್ಮ ತನ್ನ ಸಮಸ್ಯೆಗೆ ಮುರುಗನ್ ಬಳಿ ಪರಿಹಾರ ಕೇಳಿದ ಕಥೆ

ತನ್ನ ಕರ್ತವ್ಯದ ಬಗ್ಗೆ ಹೆಮ್ಮೆ ಪಡುವ ಬ್ರಹ್ಮ
ಸೃಷ್ಟಿಯು ಬ್ರಹ್ಮನ ಕರ್ತವ್ಯವಾಗಿರುತ್ತದೆ. ಯಾವುದೇ ಲೋಪವಿಲ್ಲದೆ ಬ್ರಹ್ಮನು ತನ್ನ ಕರ್ತವ್ಯ ನಿರ್ವಹಿಸುತ್ತಾನೆ. ತನ್ನ ಕೆಲಸದ ಬಗ್ಗೆ ಬ್ರಹ್ಮನಿಗೆ ಹೆಮ್ಮೆ ಇರುತ್ತದೆ. ಕರ್ತವ್ಯ ನಿರ್ವಹಿಸುವವರಲ್ಲಿ ತಾನೆ ಮೊದಲು. ತನ್ನನ್ನು ಮೀರಿಸುವವರು ಬೇರಾರು ಇಲ್ಲ ಎಂಬ ಗರ್ವವೂ ಬರುತ್ತದೆ. ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರು ಒಂದೆಡೆ ಸೇರುವ ಪ್ರಸಂಗ ಬರುತ್ತದೆ. ಆಗ ದೇವಾನುದೇವತೆಗಳು, ನಿಮ್ಮಲ್ಲಿ ಮುಖ್ಯರು ಯಾರು ಎಂಬ ಪ್ರಶ್ನೆಯನ್ನು ಮುಂದಿಡುತ್ತಾರೆ. ಆಗ ವಿಷ್ಣು ಮತ್ತು ಪರಮೇಶ್ವರರು ಮುಗುಳ್ನಗೆ ಬೀರುತ್ತಾ ಸುಮ್ಮನಿರುತ್ತಾರೆ. ಆದರೆ ಬ್ರಹ್ಮದೇವನು ನನ್ನಿಂದಲೇ ಪ್ರಂಪಚದ ಆಗುಹೋಗುಗಳು ನಡೆಯುತ್ತವೆ ಎನ್ನುತ್ತಾನೆ. ಆಗ ದೇವೇಂದ್ರನು ವಿಷ್ಣು ಮತ್ತು ಪರಮೇಸ್ವರನ ಜವಾಬ್ದಾರಿಯು ಸರಿಸಮನಾದುದು ಎನ್ನುತ್ತಾನೆ. ಆಗ ಬ್ರಹ್ಮನು ನಾನು ಜೀವಿಗಳನ್ನು ಸೃಷ್ಠಿಸದೆ ಹೋದಲ್ಲಿ ವಿಷ್ಣು ಮತ್ತು ಶಿವನಿಗೆ ಕೆಲಸವೇ ಇರುವುದಿಲ್ಲ. ಭೂಲೋಕದಲ್ಲಿ ಅವರ ಬಗ್ಗೆ ಭಯವೂ ಇರುವುದಿಲ್ಲ. ಮಾತ್ರವಲ್ಲದೆ ಅವರಿಗೆ ಪೂಜೆ ಪುನಸ್ಕಾರಗಳ ಅವಶ್ಯಕತೆಯೂ ಇರುವುದಿಲ್ಲ ಎನ್ನುತ್ತಾನೆ.