Latest Kannada Nation & World
ಮೊದಲ ದಿನವೇ ಕನಿಷ್ಠ ಗಳಿಕೆ ಕಂಡ ಬಾಲಿವುಡ್‌ನ ದೇವ ಚಿತ್ರ; ಸೋಲಿನ ಹಾದಿ ಹಿಡಿದ ಶಾಹೀದ್ ಕಪೂರ್ ಸಿನಿಮಾ

Deva box office collection day 1: ಬಾಲಿವುಡ್ ನಟ ಶಾಹೀದ್ ಕಪೂರ್ ನಟನೆಯ ದೇವ ಸಿನಿಮಾ ಶುಕ್ರವಾರ (ಜ. 31) ಬಿಡುಗಡೆ ಆಗಿದೆ. ಹೆಚ್ಚು ಹೈಪ್ ಇಲ್ಲದಿದ್ದರೂ, ಹಿಂದಿ ಭಾಷಿಕರ ಗಮನ ಸೆಳೆದಿತ್ತು ಈ ಸಿನಿಮಾ. ಆದರೆ, ಬಿಡುಗಡೆ ಆದ ಬಳಿಕ ಅದ್ಯಾಕೋ ಕೊಂಚ ಮಂಕಾಗಿದೆ. ವಿಮರ್ಶೆ ದೃಷ್ಟಿಯಿಂದ ಮಿಶ್ರ ಪ್ರತಿಕ್ರಿಯೆ ಪಡೆದ ದೇವ, ಮೊದಲ ದಿನದ ಗಳಿಕೆಯಲ್ಲಿಯೂ ಹೇಳಿಕೊಳ್ಳುವ ಮೊತ್ತ ಕಲೆಹಾಕಿಲ್ಲ. ಇಷ್ಟಿದ್ದರೂ, ಈ ವರ್ಷ ಬಾಲಿವುಡ್‌ನಲ್ಲಿ ಬಿಡುಗಡೆಯಾದ ಸಿನಿಮಾಗಳ ಪೈಕಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಹಿಂದಿ ಸಿನಿಮಾಗಳ ಸಾಲಿನಲ್ಲಿ ಎರಡನೇ ಸ್ಥಾನದಲ್ಲಿದೆ. ಹಾಗಾದರೆ ದೇವ ಚಿತ್ರದ ಮೊದಲ ದಿನದ ಕಲೆಕ್ಷನ್ ಎಷ್ಟು?