Astrology
ರಾವಣನ ವಿರುದ್ಧ ವಿಜಯಕ್ಕೂ ಮುನ್ನ ರಾಮ ಪೂಜಿಸಿದ ದೇವತೆ ಯಾರು? ಪೂಜೆಯಿಂದ ಸಿಕ್ಕ ನವರಾತ್ರಿ ಫಲಗಳಿವು

ರಾವಣ ಏಕೆ ಸಾಯುತ್ತಿಲ್ಲ ಎಂದು ರಾಮನಿಗೆ ಅರ್ಥವಾಗಲಿಲ್ಲ. ರಾವಣನ ತಲೆಯನ್ನು ಕತ್ತರಿಸಿದ ನಂತರವೂ ಅವನ ದೇಹದ ಮೇಲೆ ಹೊಸ ತಲೆ ಏಕೆ ಬರುತ್ತದೆ ಎಂದು ರಾಮನು ಯೋಚಿಸುತ್ತಾನೆ. ಈ ವಿಚಾರವಾಗಿ ರಾಮನಿಗೆ ನಿರಾಸೆ ಶುರಾಗುತ್ತದೆ. ಎಂದಿಗೂ ರಾವಣನನ್ನು ಸೋಲಿಸಲು ಸಾಧ್ಯವಿಲ್ಲ, ಅಥವಾ ಅವನನ್ನು ಕೊಲ್ಲಲು ಸಾಧ್ಯವಿಲ್ಲ ಎಂದು ಭಾವಿಸುತ್ತಾನೆ. ಈ ಚಿಂತೆಯಲ್ಲಿ, ಹೋರಾಡುವಾಗ ಒಂಬತ್ತನೇ ದಿನವೂ ಕಳೆದುಹೋಯಿತು. ಹತ್ತನೇ ದಿನ ರಾಮನು ರಾವಣನನ್ನು ಗೆಲ್ಲುವ ಬಯಕೆಯೊಂದಿಗೆ ಯುದ್ಧಕ್ಕೆ ಹೋಗುವ ಮೊದಲು ‘ಅಪರಾಜಿತಾ’ ದೇವಿಯನ್ನು ಪೂಜಿಸಿದನು. ರಾಮನ ಆರಾಧನೆಯಿಂದ ಸಂತೋಷಗೊಂಡ ದೇವಿಯು ಪ್ರತ್ಯಕ್ಷಳಾಗಿ ವಿಜಯವನ್ನು ಆಶೀರ್ವದಿಸುತ್ತಾಳೆ. ದೇವಿಯ ಆಶೀರ್ವಾದದೊಂದಿಗೆ, ರಾಮನು ರಾವಣನೊಂದಿಗೆ ಹೋರಾಡಲು ಯುದ್ಧಭೂಮಿಗೆ ಹೋದನು. ಯುದ್ಧದಲ್ಲಿ, ರಾಮನು ರಾವಣನನ್ನು ಕೊಲ್ಲುತ್ತಾನೆ. ಅಲ್ಲಿಗೆ ಅಪರಾಜಿತಾ ದೇವಿಯ ವಿಜಯದ ಆಶೀರ್ವಾದವು ಈಡೇರುತ್ತದೆ.