Latest Kannada Nation & World
ರೀಲ್ಸ್ ಹುಚ್ಚಾಟ, ಬೇರೆ ಯುವಕನೊಂದಿಗೆ ಸಂಬಂಧ; ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಕೊಂದ ಪತ್ನಿ

ಕೊಳೆತ ದೇಹ ಪತ್ತೆ
ಮಾರ್ಚ್ 28ರಂದು ಕೊಳೆತ ದೇಹ ಹೊರಬಂದಿತ್ತು. ಇದು ಯಾರಿಗೆ ಸೇರಿದ್ದು ಎಂದು ಕಂಡುಹಿಡಿಯಲು ಸದರ್ ಪೊಲೀಸ್ ಠಾಣೆಯ ಅಧಿಕಾರಿಗಳು ತನಿಖೆಯನ್ನು ಪ್ರಾರಂಭಿಸಿದರು. ಶವ ಪ್ರವೀಣ್‌ನದ್ದಾಗಿತ್ತು, ಕೆಲವು ದಿನಗಳ ಹಿಂದೆ ನಾಪತ್ತೆಯಾಗಿದ್ದ ಪ್ರವೀಣ್ ಶವವಾಗಿ ಸಿಕ್ಕಿದ್ದ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ರವೀನಾ ಮತ್ತು ಸುರೇಶ್ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದರು. ಮಧ್ಯರಾತ್ರಿಯಲ್ಲಿ ಹೆಲ್ಮೆಟ್ ಧರಿಸಿದ ಪುರುಷ ಮತ್ತು ಮಹಿಳೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದರು. ಅಂದು ಎರಡು ಗಂಟೆಗಳ ನಂತರ, ರವೀನಾ ಏನೂ ಆಗಿಲ್ಲವೆಂಬಂತೆ ಮನೆಗೆ ಮರಳಿ ಬಂದಿದ್ದಳು.