Astrology
ಕೇರಳದ ಹೊಸ ವರ್ಷದ ವಿಷು ಹಬ್ಬ ಯಾವಾಗ ದಿನಾಂಕ, ಶುಭ ಮುಹೂರ್ತ, ಮಹತ್ವದ ಮಾಹಿತಿ ಇಲ್ಲಿದೆ

Vishu 2025: ವಿಷು ಹಬ್ಬ ಸಮೀಪಿಸುತ್ತಿದೆ. ಕೇರಳ, ತುಳುನಾಡು ಹಾಗೂ ಪುದುಚೇರಿಯ ಮಾಹೆಯಲ್ಲಿ ಮಲಯಾಳಂ ಹೊಸ ವರ್ಷವನ್ನು ಆಚರಿಸುವ ಹಿಂದೂ ಹಬ್ಬವೇ ವಿಷು. ಮಲಯಾಳಂ ಕ್ಯಾಲೆಂಡರ್ ಪ್ರಕಾರ, ವಿಷು ಮೇಡಂ ತಿಂಗಳ ಮೊದಲ ದಿನದಂದು ಬರುತ್ತದೆ (ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ಏಪ್ರಿಲ್ 14 ಅಥವಾ 15). ಈ ದಿನ, ಜನರು ವಿಷ್ಣು ದೇವಾಲಯಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಹೊಸ ವರ್ಷದ ಮೊದಲ ದಿನವನ್ನು ಪ್ರಾರಂಭಿಸುತ್ತಾರೆ. ಕೇರಳ, ಕರ್ನಾಟಕ ಮತ್ತು ದೇಶದ ಇತರ ನಗರಗಳಲ್ಲಿ, ಈ ದಿನವನ್ನು ಬಹಳ ಉತ್ಸಾಹದಿಂದ ಆಚರಿಸಲಾಗುತ್ತದೆ. ಹಿಂದೂ ಕ್ಯಾಲೆಂಡರ್ ಪ್ರಕಾರ, ಈ ದಿನವು ತುಂಬಾ ಮಂಗಳಕರವಾಗಿದೆ. ಮಲಯಾಳಿಗಳು ವಿಷ್ಣುವನ್ನು ಪೂಜಿಸುತ್ತಾರೆ ಎಂದು ಹೇಳಲಾಗುತ್ತದೆ. ಈ ದಿನ, ಕೇರಳದ ಶಬರಿಮಲೆ ದೇವಸ್ಥಾನದಲ್ಲಿ ವಿಶೇಷ ಕಾರ್ಯಕ್ರಮವನ್ನೂ ಆಯೋಜಿಸಲಾಗುತ್ತದೆ.