Latest Kannada Nation & World
ರೆಪೋ ದರ 25 ಮೂಲಾಂಶ ಇಳಿಸಿದ ಆರ್‌ಬಿಐ, ಹಣದುಬ್ಬರ ಸ್ಥಿರ, ಬೆಳವಣಿಗೆ ಕುಸಿತ; ವಿತ್ತೀಯ ನೀತಿ ಸಭೆಯ 5 ಮುಖ್ಯ ಅಂಶಗಳಿವು

2) ಹಣದುಬ್ಬರ ಈ ಹಣಕಾಸು ವರ್ಷ ಸ್ಥಿರ
ಪ್ರಸಕ್ತ ಹಣಕಾಸು ವರ್ಷದಲ್ಲಿ ಹಣದುಬ್ಬರ ಪ್ರಮಾಣ ಮತ್ತಷ್ಟು ಕುಸಿಯುವುದೆಂಬ ನಂಬಿಕೆಯನ್ನು ಆರ್‌ಬಿಐ ತೋರಿದ್ದು, ಹಣಕಾಸು ವರ್ಷಕ್ಕೆ ಶೇ 4.2ರ ಬದಲು ಶೇಕಡ 4, ಮೊದಲನೇ ತ್ರೈಮಾಸಿಕ್ಕೆ ಶೇಕಡ 4.5ರ ಬದಲು ಶೇಕಡ 3.6, 2ನೇ ತ್ರೈಮಾಸಿಕಕ್ಕೆ ಶೇ 4ರ ಬದಲು ಶೇ 3.9, 3ನೇ ತ್ರೈಮಾಸಿಕಕ್ಕೆ ಶೇಕಡ 3.8, ನಾಲ್ಕನೇ ತ್ರೈಮಾಸಿಕಕ್ಕೆ ಶೇಕಡ 4.4ರ ಬದಲು ಶೇ 4.2 ಎಂದು ಮರು ನಿಗದಿ ಮಾಡಿದೆ. ಗ್ರಾಹಕ ದರ ಸೂಚ್ಯಂಕದ ಹಣದುಬ್ಬರ ಪ್ರಮಾಣ 2025-26ರಲ್ಲಿ ಶೇಕಡ 4 ಸ್ಥಿರವಾಗಿರಲಿದ್ದು, ಮೊದಲ ತ್ರೈಮಾಸಿಕದಲ್ಲಿ ಶೇಕಡ 3.6, 2ನೇ ತ್ರೈಮಾಸಿಕದಲ್ಲಿ ಶೇಕಡ 3.9, ಮೂರನೇ ತ್ರೈಮಾಸಿಕದಲ್ಲಿ ಶೇಕಡ 3.8, ನಾಲ್ಕನೇ ತ್ರೈಮಾಸಿಕದಲ್ಲಿ ಶೇಕಡ 4.4 ಅಂದಾಜಿಸಲಾಗಿದೆ ಎಂದು ಆರ್‌ಬಿಐ ಹೇಳಿದೆ.