Latest Kannada Nation & World
ರೇಟಿಂಗ್ ಬಾರದಕ್ಕೆ ಮೂಲೆಗುಂಪಾಯ್ತಾ ಸೀತಾ ರಾಮ ಧಾರಾವಾಹಿ, ಶೀಘ್ರದಲ್ಲಿಯೇ ಮುಕ್ತಾಯ? ಸಮಯ ಬದಲಾವಣೆಯಿಂದ ವೀಕ್ಷಕ ಬೇಸರ

Seetha Rama Serial Slat Change: ಸೀತಾ ರಾಮ ಸೀರಿಯಲ್ ಶುರುವಾಗಿ ಎರಡೂವರೆ ವರ್ಷವಾಯ್ತು. ಆರಂಭದಿಂದಲೂ ವೀಕ್ಷಕರ ಮೆಚ್ಚಿನ ಧಾರಾವಾಹಿಯಾಗಿರುವ ಸೀತಾ ರಾಮ, ಸದ್ಯ ಅಚ್ಚರಿಯ ತಿರುವುಗಳ ಜತೆಗೆ ಸಾಗುತ್ತಿದೆ. ಸಿಹಿ ಸಾವು, ಆಕೆಯ ಸಾವಿನ ತನಿಖೆ, ಸುಬ್ಬಿಯ ಎಂಟ್ರಿ.. ಹೀಗೆ ಒಂದಷ್ಟು ಕೌತುಕಕ್ಕೆ ಸೀತಾ ರಾಮ ಸೀರಿಯಲ್ ಹೊರಳಿದೆ. ವೀಕ್ಷಕರಿಂದ ಆರಂಭದಿಂದಲೂ ಬಹುಪರಾಕ್ ಪಡೆದ ಈ ಧಾರಾವಾಹಿ, ಬಿಗ್ ಬಾಸ್ ಶುರುವಾದಾಗಿನಿಂದ ಟಿಆರ್‌ಪಿಯಲ್ಲಿ ಕೊಂಚ ಮಂಕಾಗಿತ್ತು. ಆದರೆ, ಇದೀಗ ಇದೇ ಧಾರಾವಾಹಿಯಿಂದ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ. ಪ್ರಸಾರದ ಸಮಯದಲ್ಲಿ ಬದಲಾವಣೆ ಆಗಿದೆ.