Latest Kannada Nation & World
ರೋಹಿತ್ ಶರ್ಮಾ ಫಿಟ್, ವಿಶ್ರಾಂತಿ ಪಡೆಯುವ ಸಾಧ್ಯತೆ ಕಡಿಮೆ; ಶುಭ್ಮನ್ ಗಿಲ್ ಒಡಿಐ ನಾಯಕತ್ವದ ಕನಸಿಗೆ ತಾತ್ಕಾಲಿಕ ಬ್ರೇಕ್

ಗಾಯಗೊಂಡಿದ್ದ ಹಿನ್ನೆಲೆ ಮುಂದಿನ ಪಂದ್ಯಕ್ಕೆ ರೋಹಿತ್ಗೆ ವಿಶ್ರಾಂತಿ ನೀಡಿ, ಉಪನಾಯಕ ಶುಭ್ಮನ್ ಗಿಲ್ಗೆ ಏಕದಿನ ಕ್ರಿಕೆಟ್ ನಾಯಕತ್ವ ವಹಿಸುತ್ತಾರೆ ಎಂದು ವರದಿಯಾಗಿತ್ತು. ಇದರೊಂದಿಗೆ ಗಿಲ್ ಒಡಿಐ ನಾಯಕತ್ವಕ್ಕೆ ಪದಾರ್ಪಣೆ ಮಾಡುವ ನಿರೀಕ್ಷೆ ಕೂಡ ಹೊಂದಿದ್ದರು. ಆದರೆ ಟೆನ್ ಡೋಸ್ಚೇಟ್ ಹೇಳಿದ್ದನ್ನು ಗಮನಿಸಿದರೆ, ಉಪನಾಯಕ ಏಕದಿನ ಪಂದ್ಯದಲ್ಲಿ ಮುನ್ನಡೆಸುವ ಅವಕಾಶಕ್ಕೆ ಇನ್ನಷ್ಟು ದಿನ ಕಾಯಬೇಕಾಗುತ್ತದೆ ಎಂದು ತೋರುತ್ತದೆ. ಟಿ20ಐ ಕ್ರಿಕೆಟ್ನಲ್ಲಿ ಭಾರತ ತಂಡವನ್ನು ಮುನ್ನಡೆಸಿರುವ ಅವರು, ಶೀಘ್ರದಲ್ಲೇ ಒಡಿಐ ಜವಾಬ್ದಾರಿ ವಹಿಸಿಕೊಳ್ಳುವುದು ಖಚಿತ.