Latest Kannada Nation & World
ಲಕ್ನೋ ನವಾಬರಿಗೆ ಸೋಲುಣಿಸಿದ ಪಂಜಾಬ್ ರಾಜರು; ಸತತ ಎರಡನೇ ಗೆಲುವಿನೊಂದಿಗೆ ಮೇಲೇರಿದ ಅಯ್ಯರ್ ಪಡೆ

ಪಂಜಾಬ್ ಪರ ಅರ್ಷದೀಪ್ ಸಿಂಗ್ 3 ವಿಕೆಟ್ ಪಡೆದರೆ, ಲಾಕಿ ಫರ್ಗುಸನ್, ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಯುಜ್ವೇಂದ್ರ ಚಹಲ್ ತಲಾ ಒಂದು ವಿಕೆಟ್ ಕಿತ್ತು ರಿಷಭ್ ಪಂತ್ ಪಡೆಯನ್ನು ಧ್ವಂಸಗೊಳಿಸಿದರು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲು ಬಂದ ಲಕ್ನೋ ತಂಡದ ಆರಂಭ ಕೆಟ್ಟದಾಗಿತ್ತು. ಮಿಚೆಲ್ ಮಾರ್ಷ್ ಮೊದಲ ಓವರ್ನಲ್ಲೇ ಖಾತೆ ತೆರೆಯದೆ ಹೊರನಡೆದರು. ಹೀಗಿದ್ದಾಗ ಏಡೆನ್ ಮಾರ್ಕ್ರಾಮ್ 2ನೇ ವಿಕೆಟ್‌ಗೆ ಪೂರನ್ ಜೊತೆ 31 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು.