Latest Kannada Nation & World
ಲಕ್ನೋ ವಿರುದ್ಧ 5 ವಿಕೆಟ್ ಕಬಳಿಸಿ ಆರ್ಭಟಿಸಿದ ಹಾರ್ದಿಕ್; ಐಪಿಎಲ್ ಇತಿಹಾಸದಲ್ಲೇ ಈ ಸಾಧನೆ ಮಾಡಿದ ಮೊದಲ ನಾಯಕ

ಲಕ್ನೋ ತಂಡದ ಪ್ರಬಲ ಆಟಗಾರರಾದ ನಿಕೋಲಸ್ ಪೂರನ್, ರಿಷಭ್ ಪಂತ್, ಐಡೆನ್ ಮಾರ್ಕ್ರಮ್, ಡೇವಿಡ್ ಮಿಲ್ಲರ್ ಮತ್ತು ಆಕಾಶ್ ದೀಪ್ ವಿಕೆಟ್ ಕಬಳಿಸಿದ ಹಾರ್ದಿಕ್, ಈ ಐತಿಹಾಸಿಕ ಸಾಧನೆ ಮಾಡಿದ್ದಾರೆ. 36 ರನ್ ಬಿಟ್ಟುಕೊಟ್ಟು 5 ವಿಕೆಟ್ ಪಡೆದ ಹಾರ್ದಿಕ್ ಪಾಂಡ್ಯ, ಟಿ20 ಕ್ರಿಕೆಟ್‌ನಲ್ಲಿ ಅತ್ಯುತ್ತಮ ಅಂಕಿ-ಅಂಶ ದಾಖಲಿಸಿದರು. ಈ ಹಿಂದೆ 2023ರಲ್ಲಿ ಅಹಮದಾಬಾದ್‌ನಲ್ಲಿ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 16 ರನ್ ಬಿಟ್ಟುಕೊಟ್ಟು 4 ವಿಕೆಟ್ ಪಡೆದಿದ್ದರು. ಇಂದು ತಮ್ಮದೇ ಹಳೆಯ ದಾಖಲೆ ಮೀರಿಸಿದ ಅವರು, ಐಪಿಎಲ್ ಇತಿಹಾಸದಲ್ಲಿ ಐದು ವಿಕೆಟ್ ಪಡೆದ ಮೊದಲ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.