Latest Kannada Nation & World
ಲಾಲಾರಸ ಇದ್ರೇನೆ ಚೆಂಡು ಹೊಳಪು ಮಾಡ್ಬೋದಾ, ಬೇರೆ ಆಗಲ್ವಾ; ಶಮಿ-ಸಿರಾಜ್ ನಿಲುವಿಗೆ ವಿರುದ್ಧ ನಿಂತ ಮಿಚೆಲ್ ಸ್ಟಾರ್ಕ್

ಅಂತಾರಾಷ್ಟ್ರೀಯ ಕ್ರಿಕೆಟ್ನ ಪ್ರಮುಖ ವೇಗಿಗಳು ಲಾಲಾರಸ ನಿಷೇಧದ ಬಗ್ಗೆ ದೂರು ನೀಡಿದ ನಂತರ ಬಿಸಿಸಿಐ ಈ ನಿರ್ಧಾರ ಕೈಗೊಂಡಿದೆ. ನಿಷೇಧ ಹಿಂತೆಗೆದುಕೊಳ್ಳಬೇಕು ಎಂದು ದೊಡ್ಡ ಕರೆ ನೀಡಿದ್ದು ಬೇರೆ ಯಾರೋ ಅಲ್ಲ, ಮೊಹಮ್ಮದ್ ಶಮಿ. ಈ ವರ್ಷ ಆಸ್ಟ್ರೇಲಿಯಾ ವಿರುದ್ಧದ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್ಸ್ನಲ್ಲಿ ಭಾರತದ ಗೆಲುವಿನ ನಂತರ, ಲಾಲಾರಸ ನಿಷೇಧವು ರಿವರ್ಸ್ ಸ್ವಿಂಗ್ ಎಸೆತಗಳನ್ನು ಎಸೆಯಲು ಕಷ್ಟವಾಗುತ್ತಿದೆ ಎಂದು ಶಮಿ ಹೇಳಿದ್ದರು. ಲಾಲಾರಸ ಬಳಕೆಗೆ ಅವಕಾಶ ಕೊಟ್ಟರೆ ಹೆಚ್ಚು ಆಸಕ್ತಿದಾಯಕವಾಗಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದರು. ಇತ್ತೀಚೆಗೆ ಲಾಲಾರಸ ನಿಷೇಧದ ನಂತರ ಆಟದಲ್ಲಿ, ವಿಶೇಷವಾಗಿ ಸೀಮಿತ ಸ್ವರೂಪಗಳಲ್ಲಿ, ಬ್ಯಾಟ್ಸ್ಮನ್ಗಳು ಮೇಲುಗೈ ಸಾಧಿಸುತ್ತಿದ್ದಾರೆ ಎಂಬುದು ಅವರ ಉದ್ದೇಶವಾಗಿತ್ತು.