Latest Kannada Nation & World
ಜೈಲಿನಲ್ಲಿದ್ದೇ ಮನೆ ಮಂದಿಗೆ ಚಳ್ಳೆಹಣ್ಣು ತಿನ್ನಿಸಿದ ರಜತ್; ಇಂಥ ದುರಹಂಕಾರಕ್ಕೇನು ಕಮ್ಮಿ ಇಲ್ಲ ಬಿಡು ಎಂದ ವೀಕ್ಷಕ

ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಿಗ್ ಬಾಸ್‌ಮನೆಗೆ ಬಂದ ರಜತ್ ಕಿಶನ್, ಒಂದು ವಾರದ ಅವಧಿಯಲ್ಲಿ ಮನೆಯ ಇತರ ಸದ್ಯರನ್ನು ಬೇಕು ಅಂತಲೇ ಕೆಣಕಿದ್ದೇ ಹೆಚ್ಚು. ಅದರಲ್ಲೂ, ಗೋಲ್ಡ್ ಸುರೇಶ್‌ಗೆ ಕೆಟ್ಟ ಪದಗಳಿಂದ ನಿಂದಿಸಿ ಮನೆಯ ಸ್ಪರ್ಧಿಗಳಿಂದ ಮಾತ್ರವಲ್ಲದೆ, ವೀಕ್ಷರಿಂದಲೂ ಟೀಕೆ ಎದುರಿಸಿದ್ದರು. ಅದಾದ ಬಳಿಕ ಓವರ್ ಆಟಿಟ್ಯೂಡ್‌ನಿಂದಲೂ ಕೆಂಗಣ್ಣಿಗೆ ಗುರಿಯಾಗಿದ್ದರು. ಈಗ ಕಳಪೆ ಪಟ್ಟ ಪಡೆದು ಜೈಲು ಸೇರಿದರೂ, ಇನ್ನೂ ಈತನ ಸೊಕ್ಕು ಮುರಿದಿಲ್ಲವಲ್ಲ ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ.