Latest Kannada Nation & World
ಲೋಕಸಭೆಯಲ್ಲಿ ಒಂದು ದೇಶ ಒಂದು ಚುನಾವಣೆ ಮಸೂದೆ ಮಂಡಿಸಿದ ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘ್ವಾಲ್
One Nation One Election bill: ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದ ಮಹತ್ವಾಕಾಂಕ್ಷೆಯ ಒಂದು ದೇಶ ಒಂದು ಚುನಾವಣೆ ಮಸೂದೆ ಲೋಕಸಭೆಯಲ್ಲಿ ಇಂದು (ಡಿಸೆಂಬರ್ 17) ಮಂಡನೆಯಾಗಿದೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಏಕಕಾಲದ ಚುನಾವಣೆ ನಡೆಸುವುದಕ್ಕೆ ಪ್ರಯತ್ನಿಸುತ್ತಿದ್ದು, ಕೇಂದ್ರ ಕಾನೂನು ಸಚಿವ ಲೋಕಸಭೆಯಲ್ಲಿ ಇದಕ್ಕೆ ಸಂಬಂಧಿಸಿದ ಮಸೂದೆಯನ್ನು ಮಂಗಳವಾರ ಮಂಡಿಸಿದರು. ಸಂಸತ್‌ನ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು, ಲೋಕಸಭೆಯಲ್ಲಿ ಈ ಮಸೂದೆ ಬಗ್ಗೆ ಚರ್ಚೆ ನಡೆದ ಬಳಿಕ ಅನುಮೋದನೆ ಪಡೆಯಲಿದೆ ಅಥವಾ ಸಂಸದೀಯ ಸಮಿತಿಗೆ ಹೆಚ್ಚಿನ ಅಧ್ಯಯನಕ್ಕೆ ಒಪ್ಪಿಸುವ ಸಾಧ್ಯತೆಯೂ ಇದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಕಳೆದ ವಾರ ಎರಡು ಮಹತ್ವದ ಮಸೂದೆಗಳಿಗೆ ಅಂದರೆ ಸಂವಿಧಾನ (ಒಂದು ನೂರಾ 29ನೇ ತಿದ್ದುಪಡಿ) ಮಸೂದೆ 2024 ಮತ್ತು ಕೇಂದ್ರಾಡಳಿತ ಕಾನೂನು (ತಿದ್ದುಪಡಿ) ಮಸೂದೆ 2024 ಮಂಡಿಸುವುದಕ್ಕೆ ಅನುಮೋದನೆ ನೀಡಿತ್ತು.