Astrology
ಹೋಳಿಗೆ, ಹೊಸತೊಡಕುನೊಂದಿಗೆ ಯುಗಾದಿ ಹಬ್ಬವನ್ನ ಸಂಭ್ರಮಿಸುತ್ತೀರಾ; ಭಾರತದ ಯಾವ ರಾಜ್ಯದಲ್ಲಿ ಹೇಗೆ ಆಚರಿಸಲಾಗುತ್ತೆ ತಿಳಿಯಿರಿ

ಕರ್ನಾಟಕ, ತೆಲುಗು ರಾಜ್ಯಗಳಲ್ಲಿ ಯುಗಾದಿ
ದಕ್ಷಿಣ ಭಾರತದ ಕರ್ನಾಟಕ, ಆಂಧ್ರ ಪ್ರದೇಶ ಹಾಗೂ ತೆಲಂಗಾಣದಲ್ಲಿ ಯುಗಾದಿಯನ್ನು ಇದೇ ಹೆಸರಿನಲ್ಲಿ ಆಚರಿಸಲಾಗುತ್ತದೆ. ಹಿಂದೂ ಕ್ಯಾಲೆಂಡರ್ ಪ್ರಕಾರ, ಚೈತ್ರ ಮಾಸದ ಮೊದಲ ದಿನದಂದು ಯುಗಾದಿ ಹಬ್ಬವನ್ನು ಆಚರಿಸಲಾಗುತ್ತದೆ. ಮನೆಯನ್ನು ಸ್ವಚ್ಛಗೊಳಿಸುವುದು, ರಂಗೋಲಿ ಬಿಡಿಸುವದು, ಮನೆಯ ಮುಖ್ಯದ್ವಾರದಲ್ಲಿ ಮಾವಿನ ತೋರಣ ಕಟ್ಟುವುದು, ಹೊಸ ಬಟ್ಟೆ ಧರಿಸುವುದು, ಸಿಹಿ ತಿನಿಸುಗಳನ್ನು ವಿನಿಮಯ ಮಾಡಿಕೊಳ್ಳುವುದರೊಂದಿಗೆ ಹೊಸ ವರ್ಷವನ್ನು ಸ್ವಾಗತಿಸುತ್ತಾರೆ. ಈ ದಿನ ವರ್ಷದ ಭವಿಷ್ಯವಾಣಿಯನ್ನು ಓದುವುದು ಶುಭಕರ ಎಂದು ಪರಿಗಣಿಸಲಾಗಿರುತ್ತದೆ. ಹೀಗಾಗಿ ಕೆಲವರು ಭವಿಷ್ಯವನ್ನು ಓದುತ್ತಾರೆ.