Latest Kannada Nation & World
ವಾರೀ ಎನರ್ಜಿ ಜಿಎಂಪಿ ಇಷ್ಟೊಂದ? ಬೃಹತ್ ಸೋಲಾರ್ ಪ್ಯಾನೆಲ್ ಕಂಪನಿಯ ಐಪಿಒ ಟ್ರೆಂಡಿಂಗ್

Waaree Energy IPO GMP: ವಾರೀ ಎನರ್ಜೀಸ್ ಐಪಿಒಗೆ ಬಿಡ್ ಮಾಡಿರುವವರು ಈಗ ಇದರ ಜಿಎಂಪಿ ನೋಡಿ ಖುಷಿಯಲ್ಲಿದ್ದಾರೆ. ಶೇಕಡ 90ರಷ್ಟು ಲಾಭ ಪಡೆಯುವ ಸೂಚನೆ ದೊರಕಿರುವುದರಿಂದ ಅಲೋಟ್‌ಮೆಂಟ್ ಆಗಲಿ ಎಂದು ಸಾಕಷ್ಟು ಜನರು ಕಾಯುತ್ತಿದ್ದಾರೆ. ವಾರೀ ಎನರ್ಜಿಸ್ 4,321.44 ಕೋಟಿ ರೂ.ಗಳ ಮೇನ್‌ಲೈನ್ ಐಪಿಒ. ವಾರೀ ಎನರ್ಜಿಸ್ ಐಪಿಒ ಬಿಡ್ಡಿಂಗ್ ಅನ್ನು ಅಕ್ಟೋಬರ್ 21, 2024 ರಂದು ಚಂದಾದಾರಿಕೆಗಾಗಿ ತೆರೆಯಲಾಗಿದೆ. ಅಕ್ಟೋಬರ್ 23, 2024 ರ ತನಕ ಐಪಿಒ ಬಿಡ್‌ಗೆ ತೆರೆದಿರುತ್ತದೆ. ವಾರೀ ಎನರ್ಜಿಸ್ ಐಪಿಒಗಾಗಿ ಹಂಚಿಕೆ ಅಕ್ಟೋಬರ್ 24, 2024ರಂದು ಅಂತಿಮಗೊಳಿಸುವ ನಿರೀಕ್ಷೆಯಿದೆ. ವಾರೀ ಎನರ್ಜಿಸ್ ಐಪಿಒ ಬಿಎಸ್‌ಇ, ಎನ್‌ಎಸ್‌ಇಯಲ್ಲಿ ಲಿಸ್ಟ್ ಮಾಡಲಾಗುತ್ತದೆ. ಅಕ್ಟೋಬರ್ 28ರ ಸೋಮವಾರ ಷೇರುಪೇಟೆಯಲ್ಲಿ ಲಿಸ್ಟ್ ಮಾಡಲಾಗುತ್ತದೆ.