ವಿಲ್ ಪತ್ರ ಅಡಗಿಸಿಟ್ಟ ಜೈದೇವ್, ಕಂಪನಿ ಕೈತಪ್ಪಿ ಹೋಗುವ ದುಃಖದಲ್ಲಿ ಗೌತಮ್; ಮತ್ತೊಂದು ಟ್ವಿಸ್ಟ್ ಇದೆ ಎಂದ ವೀಕ್ಷಕ

ಭಾಗ್ಯಮ್ಮನ ಮುಂದೆ ದುಃಖ ತೋಡಿಕೊಂಡ ಗೌತಮ್
ಗೌತಮ್‌ಗೆ ಬೇಜಾರಾಗಿದೆ. ಅಮ್ಮನ ಮುಂದೆ ನೋವು ತೋಡಿಕೊಳ್ಳುತ್ತಾನೆ. ಭಾಗ್ಯಮ್ಮನ ಮುಂದೆ ಮಾತನಾಡುತ್ತಾನೆ. “ನಾನು ಇಕ್ಕಟ್ಟಿಗೆ ಸಿಲುಕಿಕೊಂಡಿದ್ದೇನೆ” ಎಂದು ಹೇಳುತ್ತಾನೆ. ಆ ಸಮಯದಲ್ಲಿ ಭೂಮಿಕಾ ಮತ್ತು ಸುಧಾ ಬರುತ್ತಾರೆ. “ವಿಲ್ ಸಿಕ್ಕಿಲ್ಲದೆ ಇದ್ದರೆ ತೊಂದರೆ ಅಲ್ವಾ” ಎಂದು ಭೂಮಿಕಾ ಕೇಳುತ್ತಾರೆ. “ಅದು ನನ್ನ ಅಪ್ಪ ಬರೆದ ವಿಲ್. ಎಲ್ಲಾ ಆಸ್ತಿ ಅಮ್ಮನಿಗೆ ಸೇರಬೇಕು, ಷೇರು ಹಂಚಿಕೆ ಬಗ್ಗೆ ಎಲ್ಲಾ ಆ ವಿಲ್‌ನಲ್ಲಿ ಬರೆದಿತ್ತು. ಇವತ್ತು ಫ್ರೂವ್ ಮಾಡ್ತಿನಿ ಅಂತ ಚಾಲೆಂಜ್ ಮಾಡಿದ್ದೆ. ಅವರು ಕೇಳುವ ಪ್ರಶ್ನೆಗಳಿಗೆ ಏನು ಅಂತ ಉತ್ತರ ನೀಡಲಿ” ಎಂದು ಗೌತಮ್ ಹೇಳುತ್ತಾರೆ. “ಅಮ್ಮ ಮಾತನಾಡುವ ಸ್ಥಿತಿಯಲ್ಲಿದ್ದರೆ ಲೀಗಲ್ ಆಗಿ ಒಂದು ಹೋಲ್ಡ್ ಇರೋದು” ಎಂದು ಗೌತಮ್ ಹೇಳುತ್ತಾರೆ. “ಸರಿ ಲೇಟ್ ಆಯ್ತು ನಾನು ಆಫೀಸ್‌ಗೆ ಹೋಗ್ತಿನಿ” ಎಂದು ಗೌತಮ್ ಹೊರಡುತ್ತಾನೆ. “ಅದೃಷ್ಟ ನಮ್ಮ ಜತೆ ಇರದೆ ಇರಬಹುದು, ಆದರೆ, ದೇವರು ಇದ್ದಾನೆ. ನಿಮಗೆ ಸೊನ್ನೆಯನ್ನು ಕೋಟಿ ಮಾಡುವ ಶಕ್ತಿ ಇದೆ” ಎಂದು ಭೂಮಿಕಾ ಭರವಸೆಯ ಮಾತುಗಳನ್ನಾಡುತ್ತಾರೆ. “ಥ್ಯಾಂಕ್ಸ್ ಭೂಮಿಕಾ, ದೇವರ ಮೇಲೆ ಭಾರ ಹಾಕ್ತಿನಿ” ಎಂದು ಹೇಳುತ್ತಾರೆ ಗೌತಮ್.