Latest Kannada Nation & World
ವಿವಾದಾತ್ಮಕ ತೀರ್ಪಿಗೆ ಯಶಸ್ವಿ ಜೈಸ್ವಾಲ್ ಔಟ್; ಮೆಲ್ಬೋರ್ನ್ ಟೆಸ್ಟ್ ಗೆಲ್ಲಲು ಆಸೀಸ್ಗೆ ನೆರವಾದರೇ ಅಂಪೈರ್?

ಮತ್ತೊಂದೆಡೆ ಸತತ ವಿಕೆಟ್ ಪತನವಾಗುತ್ತಿದ್ದರೂ ಮತ್ತೊಂದು ಎಂಡ್ನಲ್ಲಿ ಬಂಡೆಗಲ್ಲಿನಂತೆ ನಿಂತು ವಾರಿಯರ್ನಂತೆ ಹೋರಾಡಿದ ಜೈಸ್ವಾಲ್ ಸತತ 2ನೇ ಅರ್ಧಶತಕ ಸಿಡಿಸಿದರು. ಅಲ್ಲದೆ, ತಂಡವನ್ನು ರಕ್ಷಿಸುವ ಕಾರ್ಯದ ಜೊತೆಗೆ ಸೆಂಚುರಿಯತ್ತಲೂ ಮುನ್ನುಗ್ಗಿದರು. ಆದರೆ 208 ಎಸೆತಗಳಲ್ಲಿ 8 ಬೌಂಡರಿ ಸಹಿತ 84 ರನ್ ಬಾರಿಸಿದ್ದ ಎಡಗೈ ಆಟಗಾರ ವಿವಾದಾತ್ಮಕ ತೀರ್ಪಿಗೆ ಬಲಿಯಾದರು. ಪ್ಯಾಟ್ ಕಮಿನ್ಸ್ ಎಸೆದ 71ನೇ ಓವರ್ನ 5ನೇ ಎಸೆತದಲ್ಲಿ ಪುಲ್ ಮಾಡಲು ಯತ್ನಿಸಿದರು. ಆದರೆ ಚೆಂಡು ಬ್ಯಾಟ್ ತಪ್ಪಿಸಿ ವಿಕೆಟ್ ಕೀಪರ್ ಕೈ ಸೇರಿತು. ಈ ವೇಳೆ ಆಸೀಸ್ ಆಟಗಾರರು, ಅಂಪೈರ್ಗೆ ಬಲವಾದ ಮನವಿ ಸಲ್ಲಿಸಿದರು. ಆದರೆ ಮೈದಾನದ ಅಂಪೈರ್ ನಾಟ್ಔಟ್ ಎಂದು ತೀರ್ಪು ಕೊಟ್ಟರು. ಹೀಗಾಗಿ, ತಂಡದ ಆಟಗಾರರೊಂದಿಗೆ ಚರ್ಚಿಸಿದ ಕಮಿನ್ಸ್, ಆನ್ಫೀಲ್ಡ್ ಅಂಪೈರ್ ತೀರ್ಪಿಗೆ ಮೂರನೇ ಅಂಪೈರ್ಗೆ ಮೇಲ್ಮನವಿ ಸಲ್ಲಿಸಿದರು.