Latest Kannada Nation & World
ಭಾರತದ ಬ್ಯಾಂಕ್ ಖಾತೆ ಇಲ್ಲದಿದ್ರೂ ಯುಪಿಐ ಹಣ ಪಾವತಿಗೆ ಅವಕಾಶ; ವಿದೇಶಿ ಪ್ರವಾಸಿಗರು, ಎನ್‌ಆರ್‌ಐಗಳಿಗೆ ಅನುಕೂಲ

ಬೆಂಗಳೂರು, ಮೈಸೂರು, ಹಂಪಿ, ಮಂಗಳೂರು ಸೇರಿದಂತೆ ಕರ್ನಾಟಕದ ವಿವಿಧೆಡೆಗೆ ಸಾಕಷ್ಟು ವಿದೇಶಿ ಪ್ರವಾಸಿಗರು ಬರುತ್ತಾರೆ. ಇದೇ ರೀತಿ, ತಾಜ್ ಮಹಲ್, ಮುಂಬೈ, ದೆಹಲಿ ಸೇರಿದಂತೆ ವಿವಿಧ ನಗರಗಳಿಗೆ, ಪ್ರವಾಸಿ ತಾಣಗಳಿಗೆ, ಪ್ರೇಕ್ಷಣಿಯ ಸ್ಥಳಗಳಿಗೆ ಪ್ರವಾಸಿಗರು ಭೇಟಿ ನೀಡುತ್ತಾರೆ. ಆದರೆ, ಈ ಸಮಯದಲ್ಲಿ ಅವರು ಕರೆನ್ಸಿ ಎಕ್ಸ್‌ಚೇಂಜ್‌ನಿಂದ ಭಾರತದ ರೂಪಾಯಿಯನ್ನು ವಿನಿಮಯ ಮಾಡಿಕೊಳ್ಳಬೇಕಾಗುತ್ತದೆ ಅಥವಾ ಫಾರೆಕ್ಸ್ ಕಾರ್ಡ್‌ಗಳನ್ನು ಬಳಸಬೇಕಾಗುತ್ತದೆ. ಇದೀಗ ಯುಪಿಐ ಒನ್ ವರ್ಲ್ಡ್ ಮೂಲಕ ವಿದೇಶಿಗರು ಮತ್ತು ಅನಿವಾಸಿ ಭಾರತೀಯರ ಈ ಸಮಸ್ಯೆ ಬಗೆಹರಿದಿದೆ.