Latest Kannada Nation & World
ವಿಶೇಷ ವಿಡಿಯೋ ಆಮಂತ್ರಣ ಹಂಚಿಕೊಂಡ ಡಾಲಿ ಧನಂಜಯ್; ಅಭಿಮಾನಿಗಳಿಗೆ ಹೋಳಿಗೆ ಊಟ

ವಿಡಿಯೋ ಆಮಂತ್ರಣದಲ್ಲೇನಿದೆ?
ಡಾಲಿ ಧನಂಜಯ್ ಬ್ಯಾಚುಲರ್ ಆಗಿದ್ದಾಗ ಅವರ ಜೀವನ ಬೇರೆಯದೇ ರೀತಿ ಇತ್ತು, ಅವರ ಗೆಳೆಯರು ಮದುವೆ ವಿಷಯ ಬಂದಾಗ ಯಾವ ರೀತಿ ಮಾತಾಡ್ತಾ ಇದ್ರು? ಇನ್ನು ನೆಂಟರಿಷ್ಟರು ಮದುವೆ ವಿಚಾರವನ್ನು ಹೇಗೆಲ್ಲಾ ಕೇಳ್ತಾ ಇದ್ರು?, ಅವರ ಅಪ್ಪ, ಅಮ್ಮ ಮೊಮ್ಮಗುವನ್ನು ಯಾವಾಗ ಕೊಡ್ತೀಯಾ? ಮದುವೆ ಯಾವಾಗ ಮಾಡೋದು ಎಂಬ ಪ್ರಶ್ನೆಗೆ ಉತ್ತರಿಸದೇ ಡಾಲಿ ದಿನಕಳೆದಿದ್ದರು ಎಂಬ ವಿಚಾರವನ್ನು ಹಾಗೂ ಎಲ್ಲ ಯುವಕರ ವಾಸ್ತವವನ್ನು ಇಷ್ಟುಕೊಂಡು ವಿಡಿಯೋ ಆಮಂತ್ರಣ ಮಾಡಿದ್ದಾರೆ. ಹತ್ತಾರು ಹುಡುಗಿಯರ ಜಾತಕ ಮನೆಗೆ ಬಂದ್ರೂ ಅದ್ಯಾವುದನ್ನೂ ಗಣನೆಗೆ ತೆಗೆದುಕೊಳ್ಳದ ಡಾಲಿ ಧನಂಜಯ್ ಮನಸಲ್ಲಿ ಇದ್ದವರೇ ಬೇರೆ.. ಅವರೇ ಈ “ಡಾಕ್ಟರಮ್ಮ” ಎಂದು ಹೇಳುತ್ತಾ, ತಮ್ಮ ಭಾವಿ ಪತ್ನಿ ಧನ್ಯತಾಗೆ ಸ್ಥೆತಸ್ಕೋಪ್ ರಿಂಗ್ ತೊಡಿಸಿ ಡಾಲಿ ತಮ್ಮ ಅಭಿಮಾನಿಗಳಿಗೆ ಅವರನ್ನು ಪರಿಚಯಿಸಿ ಆಮಂತ್ರಿಸಿದ್ದಾರೆ.