Latest Kannada Nation & World
‘ಬಘೀರ’ ಟು ‘ಭೂಲ್ ಭುಲ್ಲಯ್ಯಾ 3’; ಬೆಳಕಿನ ಹಬ್ಬ ದೀಪಾವಳಿಗೆ ಚಿತ್ರಮಂದಿರಕ್ಕೆ ಬರ್ತಿವೆ ಬಹುನಿರೀಕ್ಷಿತ ಸಿನಿಮಾಗಳು

Diwali 2024 Releasing Movies: ಇನ್ನೇನು ಬೆಳಕಿನ ಹಬ್ಬ ದೀಪಾವಳಿಗೆ ಹೆಚ್ಚು ದಿನ ಉಳಿದಿಲ್ಲ. ಮುಂದಿನ ವಾರವೇ ಸಂಭ್ರಮದಿಂದ ಆಚರಿಸುವ ಈ ಹಬ್ಬದ ಆಗಮನವಾಗಲಿದೆ. ಈ ನಡುವೆ ಇದೇ ಹಬ್ಬದ ಪ್ರಯುಕ್ತ ಚಿತ್ರಮಂದಿರಕ್ಕೆ ನಾ ಮುಂದು ತಾ ಮುಂದು ಎಂದು ಸಾಲುಗಟ್ಟಿ ಬರಲು ಸನ್ನದ್ಧವಾಗಿ ನಿಂತಿವೆ, ಬಹುನಿರೀಕ್ಷಿತ ಸಿನಿಮಾಗಳು. ಕನ್ನಡ ಮಾತ್ರವಲ್ಲದೆ, ತೆಲುಗು, ಹಿಂದಿ, ತಮಿಳು, ಮಲಯಾಳಂ ಚಿತ್ರೋದ್ಯಮದಲ್ಲಿಯೂ ಒಂದಷ್ಟು ಸಿನಿಮಾಗಳು ಈ ಸಲದ ದೀಪಾವಳಿಗೆ ಬಿಡುಗಡೆ ಆಗಲಿವೆ. ಹಾಗಾದರೆ, ಆ ಸಿನಿಮಾಗಳು ಯಾವವು, ಇಲ್ಲಿದೆ ಮಾಹಿತಿ.