Latest Kannada Nation & World
ಬಿಗ್ ಅಪ್‌ಡೇಟ್ ಕೊಟ್ಟ ರಿಷಬ್ ಶೆಟ್ಟಿ; ಕಾಂತಾರ ಪಾರ್ಟ್ 1 ಬಿಡುಗಡೆ ದಿನಾಂಕ ಹೀಗಿದೆ

ಕಾಂತಾರ ಸಿನಿಮಾ ಕೇವಲ 16 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿತ್ತು. ಹೀಗೆ ನಿರ್ಮಾಣವಾದ ಸಿನಿಮಾ ಯಾವುದೇ ಪ್ಯಾನ್ ಇಂಡಿಯಾ ಬಗ್ಗೆ ಕನಸಲ್ಲೂ ಊಹಿಸಿರಲಿಲ್ಲ. ಕರ್ನಾಟಕದಲ್ಲಿ ಕನ್ನಡಿಗರು ಈ ಸಿನಿಮಾವನ್ನು ಎತ್ತಿ ಮೆರೆಸುತ್ತಿದ್ದಂತೆ, ಪರಭಾಷಿಕರೂ ಈ ಸಿನಿಮಾಕ್ಕೆ ಅದೇ ಪ್ರೀತಿ ತೋರಿಸಿದರು. ತಾನೇ ತಾನಾಗಿಯೇ ಈ ಸಿನಿಮಾ ಪ್ಯಾನ್ ಇಂಡಿಯಾ ಪಟ್ಟವನ್ನು ಅಲಂಕರಿಸಿತು. ಪರಭಾಷೆಗಳಿಗೆ ಡಬ್ ಆಗಿ, ನೂರಾರು ಕೋಟಿ ಬಾಚಿಕೊಂಡಿತು. ಒಟ್ಟಾರೆಯಾಗಿ 400 ಪ್ಲಸ್ ಕೋಟಿ ಗಳಿಕೆ ಕಂಡು, ಹೊಸ ದಾಖಲೆ ಬರೆಯಿತು.