Latest Kannada Nation & World
ವಿಶ್ವ ಚಾಂಪಿಯನ್ ಡಿ ಗುಕೇಶ್ಗೆ ಸೋಲುಣಿಸಿ ಪ್ರಶಸ್ತಿ ಗೆದ್ದ ಪ್ರಜ್ಞಾನಂದ

ಪ್ರಶಸ್ತಿ ಸುತ್ತಿಗೂ ಮುನ್ನ ಪ್ರಜ್ಞಾನಂದ ಟ್ರೋಫಿ ಗೆಲ್ಲಲು ಡ್ರಾ ಅಗತ್ಯ ಇತ್ತು. ಆದರೆ 19 ವರ್ಷದ ಯುವಕ, ಜರ್ಮನಿಯ ವಿನ್ಸೆಂಟ್ ಕೀಮರ್ ವಿರುದ್ಧ ಸೋತರು. ಮತ್ತೊಂದೆಡೆ ಗುಕೇಶ್ ಸಹ ದೇಶವಾಸಿ ಅರ್ಜುನ್ ಎರಿಗೈಸಿ ವಿರುದ್ಧ ಪರಾಭವಗೊಂಡರು. ತದನಂತರ 8.5 ಅಂಕ ಪಡೆದು ಜಂಟಿ ಅಗ್ರಸ್ಥಾನ ಪಡೆಸಿದ್ದ ಕಾರಣ ವಿಜೇತರನ್ನು ಘೋಷಿಸಲು ಟೈ ಬ್ರೇಕರ್ ಮೊರೆ ಹೋಗಬೇಕಾಯಿತು. ಆರಂಭಿಕ ಗೇಮ್ನಲ್ಲಿ ಗುಕೇಶ್, ಗೆಲುವಿನ ನಗೆ ಬೀರಿದರೆ, ನಂತರ ಪುಟಿದೆದ್ದ ಪ್ರಜ್ಞಾನಂದ ಸತತ 2 ಪಂದ್ಯ ಗೆದ್ದು ಚಾಂಪಿಯನ್ ಪಟ್ಟ ಅಲಂಕರಿಸಿದರು.