Latest Kannada Nation & World
ಬಿಗ್ ಬಾಸ್‌ಗೆ ಟಕ್ಕರ್! ಕಿರುತೆರೆಯ ದೊಡ್ಡ ಎಂಟರ್ಟೈನ್ಮೆಂಟ್ ಶೋ ಆಗಮನಕ್ಕೆ ದಿನಗಣನೆ; ಹೇಗಿರುತ್ತೆ, ಯಾರೆಲ್ಲ ಇರ್ತಾರೆ, ಯಾವಾಗ ಶುರು?

ಯಾರೆಲ್ಲ ಭಾಗವಹಿಸಲಿದ್ದಾರೆ?
ಸದ್ಯ ಬಿಡುಗಡೆ ಆಗಿರುವ ಪ್ರೋಮೋದಲ್ಲಿ ಎಂಟರ್‌ಟೈನ್‌ಮೆಂಟ್‌ನ ಸೈರನ್ ಕೊಡೋಕೆ ಬರ್ತಿದ್ದಾರೆ ಜೀ ಎಂಟರ್‌ಟ್ರೈನರ್ಸ್. ನೋಡೋಕೆ ರೆಡಿನಾ? ಎಂಬ ಹಿನ್ನೆಲೆ ಧ್ವನಿ ಇದೆ. ಇನ್ನು ಇದೇ ಪ್ರೋಮೋದಲ್ಲಿ ಸೀತಾ ರಾಮ ಸೀರಿಯಲ್‌ನ ರಾಮ್-ಸೀತಾ, ಪ್ರಿಯಾ ಅಶೋಕ ಮತ್ತು ಸಹಿ, ಲಕ್ಷ್ಮೀ ನಿವಾಸ ಧಾರಾವಾಹಿಯಿಂದ ಜಾನು- ಜಯಂತ್, ಸಿದ್ಧೇಗೌಡ- ಭಾವನಾ ಸಹ ಕಂಡಿದ್ದಾರೆ. ಅಮೃತಧಾರೆ ಸೀರಿಯಲ್‌ನ ಪಾರ್ಥ ಮತ್ತು ಅಪ್ಪಿ ಕಾಣಿಸಿದರೆ, ಪುಟ್ಟಕ್ಕನ ಮಕ್ಕಳು ಸೀರಿಯಲ್‌ನ ಕಂಠಿ ಸಖತ್ ಬೈಕ್ ಸ್ಟಂಟ್ ಮಾಡಿ ಸಾಹಸ ಮೆರೆದಿದ್ದಾರೆ. ಅಣ್ಣಯ್ಯ ಮತ್ತು ಬ್ರಹ್ಮಗಂಟು ಸೀರಿಯಲ್ ಕಲಾವಿದರೂ ಪ್ರೋಮೋದಲ್ಲಿದ್ದಾರೆ.