ವೃಷಭ ರಾಶಿಯಲ್ಲಿ ಶುಕ್ರನ ಸಂಚಾರ; ದ್ವಾದಶ ರಾಶಿಗಳ ಮೇಲೆ ಪರಿಣಾಮ, ಯಾವ ರಾಶಿಗೆ ಶುಭ, ಯಾರಿಗೆ ಅಶುಭ?

ಶುಕ್ರನು ಈ ತಿಂಗಳ ಅಂತ್ಯದಲ್ಲಿ ವೃಷಭ ರಾಶಿಗೆ ಪ್ರವೇಶ ಮಾಡಲಿದ್ದಾನೆ. ಶುಕ್ರನ ರಾಶಿ ಬದಲಾವಣೆಯು ದ್ವಾದಶ ರಾಶಿಗಳ ಮೇಲೆ ಪರಿಣಾಮ ಬೀರಲಿದೆ. ಇದರಿಂದ ಯಾವ ರಾಶಿಗೆ ಶುಭವಾಗಲಿದೆ, ಯಾರಿಗೆ ಅಶುಭ ಎನ್ನುವ ವಿವರ ಇಲ್ಲಿದೆ.
ವೃಷಭ ರಾಶಿಯಲ್ಲಿ ಶುಕ್ರನ ಸಂಚಾರ; ದ್ವಾದಶ ರಾಶಿಗಳ ಮೇಲೆ ಪರಿಣಾಮ
ಶುಕ್ರನು ಜೂನ್ 29ರಂದು ವೃಷಭರಾಶಿಯನ್ನು ಪ್ರವೇಶಿಸುತ್ತಾನೆ. ಜುಲೈ 26ರವರೆಗೂ ಇದೇ ರಾಶಿಯಲ್ಲಿ ಸಂಚರಿಸುತ್ತಾನೆ. ವೃಷಭರಾಶಿಯು ಶುಕ್ರನಿಗೆ ಸ್ವಕ್ಷೇತ್ರವಾಗುತ್ತದೆ. ಆದ್ದರಿಂದ ಕೆಲವು ರಾಶಿಗಳಿಗೆ ಉತ್ತಮ ಫಲಗಳನ್ನು ನೀಡಿದರೆ, ಇನ್ನುಳಿದ ರಾಶಿಗಳಿಗೆ ಮಧ್ಯಮಗತಿಯ ಫಲಿತಾಂಶ ದೊರೆಯುತ್ತದೆ.
ಮೇಷ ರಾಶಿ
ಮಾತಿನ ಮೇಲೆ ಹತೋಟಿಯನ್ನು ಸಾಧಿಸುವಿರಿ. ಸಮಯ ವ್ಯರ್ಥ ಮಾಡದೇ ಯಾವುದಾದರೊಂದು ಚಟುವಟಿಕೆಯಲ್ಲಿ ನಿರತರಾಗುವಿರಿ. ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಸಂಧಾನದ ಮಾತುಕತೆಯಿಂದ ಪರಿಹರಿಸುವಿರಿ. ಕುಟುಂಬದಲ್ಲಿ ಶಾಂತಿ ನೆಮ್ಮದಿ ನೆಲೆಸಿರುತ್ತದೆ. ದಂಪತಿಗಳ ನಡುವೆ ಉತ್ತಮ ಬಾಂಧವ್ಯ ಮೂಡುತ್ತದೆ. ಯಾವುದೇ ವಿಚಾರವಾದರೂ ಆತುರದ ತೀರ್ಮಾನವನ್ನು ತೆಗೆದುಕೊಳ್ಳದೆ ಬುದ್ದಿವಂತಿಕೆಯಿಂದ ವರ್ತಿಸುವಿರಿ. ಸಹನೆಯಿಂದ ಎಲ್ಲರ ಮನಸ್ಸನ್ನು ಗೆಲ್ಲುವಿರಿ. ಹಣಕಾಸಿನ ತೊಂದರೆ ಇರುವುದಿಲ್ಲ. ಕಡಿಮೆ ಮಟ್ಟದ ಆದಾಯವಿದ್ದರೂ ಖರ್ಚುವೆಚ್ಚಗಳ ಮೇಲೆ ಹಿಡಿತ ಸಾಧಿಸುವಿರಿ. ಆಪತ್ತಿನಲ್ಲಿ ಇದ್ದವರಿಗೆ ಸಹಾಯ ಮಾಡುವಿರಿ. ಶುಭಸಮಾರಂಭಗಳಲ್ಲಿ ಭಾಗವಹಿಸುವಿರಿ. ಸ್ತೀಯರಿಗೆ ವಿಶೇಷವಾದ ಫಲಗಳು ದೊರೆಯುತ್ತವೆ. ಕಣ್ಣಿನ ತೊಂದರೆ ನಿಮ್ಮನ್ನು ಕಾಡುತ್ತದೆ. ಉದ್ಯೋಗದಲ್ಲಿ ನಿಧಾನಗತಿಯ ಪ್ರಗತಿ ಇರಲಿದೆ. ವೃತ್ತಿಕ್ಷೇತ್ರದಲ್ಲಿ ನಿಮಗೆ ವಿಶೇಷವಾದ ಅಧಿಕಾರ ದೊರೆಯುತ್ತದೆ. ಸ್ವಂತ ವ್ಯಾಪಾರ ವ್ಯವಹಾರದಲ್ಲಿ ಉತ್ತಮ ವರಮಾನ ಇರುತ್ತದೆ. ಕುಟುಂಬದಲ್ಲಿನ ಹೆಣ್ಣುಮಕ್ಕಳಿಗೆ ಪ್ರತಿಷ್ಠಿತ ಸ್ಥಾನಮಾನ ಲಭಿಸುತ್ತದೆ. ಚರ್ಮದ ದೋಷವು ದೂರವಾಗುತ್ತದೆ. ಪುರುಷರು ಸಣ್ಣ ಪುಟ್ಟ ವಿಚಾರಗಳಿಗೂ ಪತ್ನಿಯನ್ನು ಆಶ್ರಯಿಸುತ್ತಾರೆ. ಮನೆಯನ್ನು ನವೀಕರಣಗೊಳಿಸಲು ಆಕರ್ಷಕ ವಸ್ತುಗಳನ್ನು ಕೊಳ್ಳುವಿರಿ.
ವೃಷಭ ರಾಶಿ
ಉತ್ತಮ ಆರೋಗ್ಯವನ್ನು ಗಳಿಸುವಿರಿ. ಹಣಕಾಸಿನ ವ್ಯವಹಾರದಲ್ಲಿ ವಿಶೇಷವಾದ ಜ್ಞಾನವನ್ನು ಸಂಪಾದಿಸುವಿರಿ. ಕುಟುಂಬದ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸುವಿರಿ. ದಂಪತಿಗಳ ನಡುವೆ ಉತ್ತಮ ಪ್ರೀತಿ ವಿಶ್ವಾಸ ನೆಲೆಸಿರುತ್ತದೆ. ಆಕರ್ಷಕವಾದ ಒಡವೆ ಮತ್ತು ವಸ್ತ್ರಗಳಿಗೆ ಹಣವನ್ನು ಖರ್ಚು ಮಾಡುವಿರಿ. ಎಲ್ಲರೂ ಮೆಚ್ಚುವಂತಹ ಗುಣವು ನಿಮಗಿರುತ್ತದೆ. ನಿಮ್ಮ ತೀರ್ಮಾನಗಳು ಎಲ್ಲರ ಮೆಚ್ಚುಗೆ ಮತ್ತು ಒಪ್ಪಿಗೆ ಗಳಿಸುತ್ತದೆ. ಹಣದ ಅನುಕೂಲತೆ ಇರಲಿದೆ. ಅನಾವಶ್ಯಕ ಖರ್ಚುವೆಚ್ಚಗಳು ನಿಮಗೆ ಬೇಸರವನ್ನು ಉಂಟುಮಾಡುತ್ತದೆ. ಉದ್ಯೋಗಸ್ಥ ಮಹಿಳೆಯರಿಗೆ ವಿಶೇಷವಾದ ಮನ್ನಣೆ ಮತ್ತು ಆದಾಯ ದೊರೆಯುತ್ತದೆ. ನಿಮ್ಮಿಂದ ಸಹಾಯ ಪಡೆದವರೇ ನಿಮ್ಮ ಪ್ರಗತಿಗೆ ಅಡ್ಡಗಾಲಾಗುತ್ತಾರೆ. ನಿಮ್ಮ ಮನಸ್ಸನ್ನು ಬದಲಿಸಲು ಸಾಧ್ಯವಾಗುವುದಿಲ್ಲ. ವಾತ ಮತ್ತು ಕಫದ ತೊಂದರೆಯಿಂದ ಬಳಲುವಿರಿ. ಕುಟುಂಬದ ಬಳಕೆಗಾಗಿ ಹೊಸ ವಾಹನವನ್ನು ಕೊಳ್ಳುವಿರಿ. ಸೋಲುವ ವೇಳೆಯಲ್ಲಿ ಕೋಪದಿಂದ ವರ್ತಿಸುವಿರಿ. ಅವಿವಾಹಿತರಿಗೆ ವಿವಾಹದ ಮಾತುಕತೆ ಆಗುತ್ತದೆ. ಸ್ವಂತ ಮನೆಯನ್ನು ಸಂಗಾತಿಯ ಸಹಾಯದಿಂದ ಕೊಳ್ಳುವಿರಿ. ಅರಂಭಿಸಿದ ಕೆಲಸ ಕಾರ್ಯಗಳನ್ನು ಆತಂಕದ ನಡುವೆಯೂ ಪೂರ್ಣಗೊಳಿಸುವಿರಿ. ನಿಮ್ಮ ನಗುಮೊಗ ಎಲ್ಲರ ಮನ ಸೆಳೆಯುತ್ತದೆ.
ಮಿಥುನ ರಾಶಿ
ದೊರೆಯುವ ಅವಕಾಶಗಳನ್ನು ಉಪಯೋಗಿಸಿಕೊಳ್ಳಲು ಹೆಚ್ಚಿನ ಪ್ರಯತ್ನ ಬೇಕಾಗುತ್ತದೆ. ಅನಾವಶ್ಯಕವಾಗಿ ಒಮ್ಮೆ ತೆಗೆದುಕೊಂಡ ತೀರ್ಮಾನಗಳನ್ನು ಬದಲಿಸುವಿರಿ. ನಿಮ್ಮನ್ನಿನ ತಪ್ಪು ಕಲ್ಪನೆಯು ಹೊಸ ಸಮಸ್ಯೆಗಳನ್ನು ಸೃಷ್ಟಿಸುತ್ತದೆ. ಮಕ್ಕಳ ಆರೋಗ್ಯದ ಬಗ್ಗೆ ಗಮನವಿರಲಿ. ಮಕ್ಕಳ ಸಲುವಾಗಿ ಹೆಚ್ಚು ಹಣ ಖರ್ಚಾಗುತ್ತದೆ. ವಿದ್ಯಾರ್ಥಿಗಳು ಉನ್ನತ ಅಧ್ಯಯನಕ್ಕಾಗಿ ದೂರದ ಸ್ಥಳಕ್ಕೆ ತೆರಳುವ ಸಾಧ್ಯತೆಗಳಿವೆ. ಅನಿರೀಕ್ಷಿತ ಖರ್ಚು ವೆಚ್ಚಗಳಿಂದ ಬೇಸರಗೊಳ್ಳುವಿರಿ. ನಿಮ್ಮ ಸ್ವಂತ ಅವಶ್ಯಕತೆಗಳನ್ನು ಕಡಿತಗೊಳಿಸುವಿರಿ. ಕ್ರಮೇಣವಾಗಿ ಆದಾಯದಲ್ಲಿ ಪ್ರಗತಿ ಉಂಟಾಗುತ್ತದೆ. ದಂಪತಿಗಳು ಶಾಂತಿ ನೆಮ್ಮದಿಯಿಂದ ಬಾಳುತ್ತಾರೆ. ಅನ್ಯರ ವಿಚಾರವಾಗಿ ಮಾನಸಿಕ ಒತ್ತಡಕ್ಕೆ ಒಳಗಾಗುವಿರಿ. ಹೆಣ್ಣು ಮಕ್ಕಳು ಎಲ್ಲರ ವಿಶ್ವಾಸವನ್ನು ಗಳಿಸುತ್ತಾರೆ. ಚಾಣ್ಮೆಯಿಂದ ವರ್ತಿಸುವ ಕಾರಣ ಉದ್ಯೋಗದಲ್ಲಿ ಗೌರವಯುತ ಸ್ಥಾನ ದೊರೆಯುತ್ತದೆ. ಸೋದರಿಯ ಜೀವನದಲ್ಲಿ ಎದುರಾಗಿದ್ದ ಮನಸ್ತಾಪವು ಮರೆಯಾಗುತ್ತದೆ. ನಿಮ್ಮನ್ನು ನಂಬಿದವರಿಗೆ ಉತ್ತಮ ಭವಿಷ್ಯ ಕಲ್ಪಿಸುವಿರಿ. ಸಾಹಸದ ಕ್ರೀಡೆಗಳಲ್ಲಿ ಪಾಲ್ಗೊಳ್ಳುವವರಿಗೆ ವಿಶೇಷ ಪ್ರಶಸ್ತಿ ಲಭಿಸುತ್ತದೆ. ಮನರಂಜನಾ ಸ್ಥಳಕ್ಕೆ ಕುಟುಂಬದ ಸದಸ್ಯರ ಜೊತೆಯಲ್ಲಿ ಭೇಟಿ ನೀಡುವಿರಿ. ಆಹಾರ ಸೇವನೆಯ ಬಗ್ಗೆ ಎಚ್ಚರಿಕೆ ವಹಿಸಿ.
ಕಟಕ ರಾಶಿ
ವಿದ್ಯಾರ್ಥಿಗಳಿಗೆ ವಿಶೇಷವಾದ ಗೌರವ ದೊರೆಯುತ್ತದೆ. ತಮಗೆ ಇಷ್ಟ ಎನಿಸುವ ವಿಚಾರಗಳನ್ನು ಅಧ್ಯಯನ ಮಾಡುವಿರಿ. ವಿದೇಶಿ ಭಾಷೆಯನ್ನು ಕಲಿಯುವವರಿಗೆ ಅನಿರೀಕ್ಷಿತ ಧನ ಲಾಭವಿರುತ್ತದೆ. ಹೆಚ್ಚಿನ ಹಣವಿದ್ದರೂ ಅನಾವಶ್ಯಕವಾಗಿ ಖರ್ಚು ಮಾಡುವುದಿಲ್ಲ. ಸ್ವಗ್ರಹ ಭೂ ಲಾಭವಿದೆ. ಕುಟುಂಬದ ದೊಡ್ಡ ಜವಾಬ್ದಾರಿಯನ್ನು ವಹಿಸಿಕೊಳ್ಳುವಿರಿ. ಒಂದಕ್ಕಿಂತಲೂ ಹೆಚ್ಚಿನ ವಾಹನವನ್ನು ಕೊಳ್ಳುವಿರಿ. ನಂಬಲು ಅನರ್ಹವಾದ ಮೂಲದಿಂದ ಹಣದ ಸಹಾಯ ದೊರೆಯುತ್ತದೆ. ಅವಿವಾಹಿತರಿಗೆ ವಿವಾಹ ಯೋಗವಿದೆ. ವ್ಯಾಪಾರ ವ್ಯವಹಾರಗಳಲ್ಲಿ ಮಧ್ಯಮ ಗತಿಯ ಲಾಭವಿರುತ್ತದೆ. ಯಾವುದೇ ಕೆಲಸ ಕಾರ್ಯಗಳನ್ನು ಹೆಚ್ಚಿನ ಪರಿಶ್ರಮದಿಂದ ಪೂರ್ಣಗೊಳಿಸುವಿರಿ. ನಿಮ್ಮ ಮಾತುಗಳ ಒಳಾರ್ಥವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ದಾಂಪತ್ಯ ಜೀವನದಲ್ಲಿನ ಮನಸ್ತಾಪಗಳು ದೂರವಾಗುತ್ತವೆ. ಜೀವನದಲ್ಲಿ ನಿಧಾನಗತಿಯಲ್ಲಿ ಅಭಿವೃದ್ಧಿ ಕಂಡುಬರುತ್ತದೆ. ನಿಮಗೆ ಕಫ ಮತ್ತು ಉದರಕ್ಕೆ ಸಂಬಂಧಿಸಿದ ದೋಷವಿರುತ್ತದೆ. ಸುಲಭವಾಗಿ ನಿಮ್ಮ ಮಾತುಗಳನ್ನು ಯಾರು ಒಪ್ಪುವುದಿಲ್ಲ. ಹಿರಿಯ ಸೋದರ ಅಥವಾ ಸೋದರಿಗೆ ಸಹಾಯ ಮಾಡುವಿರಿ. ನವ ವಿವಾಹಿತರಿಗೆ ಹೊಸ ರೀತಿಯ ಶುಭಫಲಗಳು ದೊರೆಯುತ್ತವೆ. ತಾಯಿಯ ಜೊತೆಗೋಡಿ ಹೊಸ ಬಗೆಯ ವ್ಯಾಪಾರ ವಹಿವಾಟುಗಳನ್ನು ಆರಂಭಿಸುವಿರಿ.
ಸಿಂಹ ರಾಶಿ
ನೋಡಲು ಶಾಂತರಾಗಿ ಕಂಡರು ಕೋಪಗೊಂಡಾಗ ಉಗ್ರವಾಗಿ ವರ್ತಿಸುವಿರಿ. ಸುಲಭವಾಗಿ ಸೋಲನ್ನು ಒಪ್ಪಿಕೊಳ್ಳುವುದಿಲ್ಲ. ನಿಮ್ಮ ಸೋಲಿಗೆ ಬೇರೆಯವರನ್ನು ಹೊಣೆ ಮಾಡುವಿರಿ. ಯಾವುದೇ ಕೆಲಸ ಕಾರ್ಯಗಳನ್ನು ಆರಂಭಿಸಿದರು ಆರಂಭದಲ್ಲಿ ಅಡ್ಡಿ ಆತಂಕಗಳು ಎದುರಾಗುತ್ತವೆ. ಸ್ವಂತ ಬಳಕೆಗಾಗಿ ಹೊಸ ವಾಹನವನ್ನು ಕೊಳ್ಳುವಿರಿ. ಕುಟುಂಬದಲ್ಲಿ 10 ಹಲವು ಧಾರ್ಮಿಕ ಸಮಾರಂಭಗಳನ್ನು ಹಮ್ಮಿಕೊಳ್ಳುವಿರಿ. ಕಷ್ಟವೆನಿಸಿದರು ಆರಂಭಿಸಿದ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಗಳಿಸುವಿರಿ. ಕೇವಲ ಕುಟುಂಬವಲ್ಲದೆ ಸಮಾಜದಲ್ಲಿಯೂ ನಿಮಗೆ ಗೌರವಯುತ ಸ್ಥಾನಮಾನ ಲಭಿಸುತ್ತದೆ. ಸಮಯ ಸಂದರ್ಭಕ್ಕೆ ಅನುಗುಣವಾಗಿ ಮಾತನಾಡಬಲ್ಲಿರಿ. ಮಾತೇ ನಿಮ್ಮ ಮೂಲ ಬಂಡವಾಳವಾಗುತ್ತದೆ. ಸ್ತ್ರೀಯರಿಗೆ ಶೀತದ ತೊಂದರೆ ಇರುತ್ತದೆ. ಉತ್ತಮ ಆದಾಯವಿದ್ದರೂ ಸರಿಸಮನಾದ ಖರ್ಚು ವೆಚ್ಚಗಳಿರುತ್ತವೆ. ನಿಮ್ಮ ಒಳ್ಳೆಯ ನಡವಡಿಕೆಯಿಂದ ಎಲ್ಲರ ವಿಶ್ವಾಸವನ್ನು ಗಳಿಸುವಿರಿ. ಉದ್ಯೋಗದಲ್ಲಿ ಅಧಿಕಾರಿಯ ಸ್ಥಾನವನ್ನು ಗಳಿಸುವಿರಿ. ತಂದೆಯೊಡನೆ ವಿಶೇಷವಾದ ಪ್ರೀತಿ ವಿಶ್ವಾಸವಿರುತ್ತದೆ. ಹಣಕಾಸಿನ ವ್ಯವಹಾರದಲ್ಲಿ ವಿಶೇಷ ಜ್ಞಾನವಿರುತ್ತದೆ. ಸುಲಭವಾಗಿ ಯಾರನ್ನು ನಂಬುವುದಿಲ್ಲ. ಲಾಭವಿಲ್ಲದ ಕೆಲಸಗಳನ್ನು ಮಾಡುವುದಿಲ್ಲ. ಜನ್ಮಸ್ಥಳದಲ್ಲಿರುವ ದೇವಾಲಯದ ಜೀರ್ಣೋದ್ಧಾರಕ್ಕೆ ಹಣಕಾಸಿನ ಸಹಾಯ ಮಾಡುವಿರಿ.
ಕನ್ಯಾ ರಾಶಿ
ಕುಟುಂಬದಲ್ಲಿ ಮಂಗಳ ಕಾರ್ಯಗಳನ್ನು ನೆರವೇರಿಸಿ ಎಲ್ಲರ ಮನಸ್ಸನ್ನು ಗೆಲ್ಲುವಿರಿ. ಮನಸ್ಸಿಗೆ ಇಷ್ಟವೆನಿಸುವ ಕೆಲಸಕಾರ್ಯಗಳನ್ನು ಮಾತ್ರ ಆಯ್ದುಕೊಳ್ಳುವಿರಿ. ಪರಿಸ್ಥಿತಿಯ ಒತ್ತಡಕ್ಕೆ ಮಣಿದು ನಿಮ್ಮ ತೀರ್ಮಾನಗಳನ್ನು ಬದಲಿಸುವುದಿಲ್ಲ. ಕಾಲಿಗೆ ಸಂಬಂಧಿಸಿದ ಸಮಸ್ಯೆಯೂ ದೂರವಾಗುತ್ತದೆ. ಉತ್ತಮ ಆರೋಗ್ಯದಿಂದ ಬಾಳುವಿರಿ. ಅತಿ ಕಷ್ಟಕರವಾದ ಕೆಲಸ ಕಾರ್ಯಗಳಿಂದ ದೂರ ಉಳಿಯುವಿರಿ. ನಿಮ್ಮ ತಂದೆಯವರಿಗೆ ಹಣದ ಸಹಾಯ ಮಾಡುವಿರಿ. ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತದೆ. ಹಿರಿಯ ಸೋದರನ ಜೊತೆಯಲ್ಲಿ ಹಣಕಾಸಿನ ವಿಚಾರದಲ್ಲಿ ಭಿನ್ನಾಭಿಪ್ರಾಯ ಉಂಟಾಗುತ್ತದೆ. ಧರ್ಮ ಗುರುಗಳನ್ನು ಭೇಟಿ ಮಾಡುವಿರಿ. ನಿಮ್ಮ ನಿರೀಕ್ಷೆಯಂತೆ ಕೆಲಸ ಕಾರ್ಯಗಳು ನಡೆಯಲಿವೆ. ಹೊಸ ವಾಹನ ಲಾಭವಿದೆ. ಸೌಂದರ್ಯ ಸಾಧನಗಳಿಗೆ ಹೆಚ್ಚಿದ ಹಣ ಬೇಕಾಗುತ್ತದೆ. ನಿಮ್ಮಲ್ಲಿ ಎಷ್ಟೇ ವಿದ್ಯೆ ಇದ್ದರೂ ವಿವೇಕದಿಂದ ವರ್ತಿಸುವಿರಿ. ಹಣಕಾಸಿನ ವಿಚಾರದಲ್ಲಿ ಬೇರೆಯವರನ್ನು ನಂಬುವುದಿಲ್ಲ. ಮಕ್ಕಳ ಸಲುವಾಗಿ ಮಿತಿ ಇಲ್ಲದ ಖರ್ಚು ವೆಚ್ಚಗಳಿರುತ್ತವೆ. ವಿದೇಶದಲ್ಲಿ ಉದ್ಯೋಗ ಗಳಿಸುವ ಸಲುವಾಗಿ ಹೆಚ್ಚಿನ ಪ್ರಯತ್ನ ಪಡುವಿರಿ. ಬೇರೆಯವರ ಪರವಾಗಿ ನ್ಯಾಯ ನೀತಿಯನ್ನು ಉಳಿಸಲು ಹೋರಾಡಲು ಹಿಂಜರಿಯುವುದಿಲ್ಲ
ತುಲಾ ರಾಶಿ
ಕುಟುಂಬದಲ್ಲಿ ಸುಖ ಸಂತೋಷ ನೆಲೆಸಿರುತ್ತದೆ. ಕುಟುಂಬದ ಹಿರಿಯರಿಗೆ ಮುಖ್ಯವಾಗಿ ತಾಯಿಯವರಿಗೆ ಅನಾರೋಗ್ಯವಿರುತ್ತದೆ. ದಾಂಪತ್ಯ ಜೀವನದಲ್ಲಿ ಪರಸ್ಪರ ಉತ್ತಮ ಹೊಂದಾಣಿಕೆ ಇರಲಿದೆ. ಕಷ್ಟಪಟ್ಟು ಕೆಲಸ ಕಾರ್ಯಗಳನ್ನು ನಿರ್ವಹಿಸಿದರು ನಿರೀಕ್ಷಿಸಿದ ಯಶಸ್ಸು ದೊರೆಯುವುದಿಲ್ಲ. ಅವಿವಾಹಿತರಿಗೆ ವಿವಾಹ ಯೋಗವಿದೆ. ಸೋಲಿನ ಭಯವಿಲ್ಲದೆ ಧೈರ್ಯದಿಂದ ನಾಯಕನ ಸ್ಥಾನ ಅಲಂಕರಿಸುವಿರಿ. ಸೋದರ ಮಾವನ ಜೊತೆಯಲ್ಲಿ ಹಣಕಾಸಿನ ವಿಚಾರದಲ್ಲಿ ಮನಸ್ತಾಪ ಉಂಟಾಗುತ್ತದೆ. ಆತ್ಮೀಯರ ಕೌಟುಂಬಿಕ ಕಲಹವನ್ನು ಮಾತುಕತೆಯಿಂದ ಸರಿಪಡಿಸುವಿರಿ. ಹಠದಿಂದ ಆರಂಭಿಸಿದ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಗಳಿಸುವಿರಿ. ಬಂಧು ಬಳಗದವರಿಂದ ದೂರ ಉಳಿಯಲು ಪ್ರಯತ್ನಿಸುವಿರಿ. ನಿಮಗೆ ಉಷ್ಣದ ದೋಷವಿರುತ್ತದೆ. ರಕ್ತಕ್ಕೆ ಸಂಬಂಧಪಟ್ಟ ಅನಾರೋಗ್ಯವಿದ್ದಲ್ಲಿ ಎಚ್ಚರಿಕೆ ವಹಿಸಿ. ಆತುರದಲ್ಲಿ ಕೆಲಸ ಕಾರ್ಯಗಳನ್ನು ಆರಂಭಿಸುವಿರಿ. ಅನಾವಶ್ಯಕವಾಗಿ ಬೇರೆಯವರ ವಿಚಾರದಲ್ಲಿ ನಿಮ್ಮ ಅಭಿಪ್ರಾಯ ತಿಳಿಸುವುದಿಲ್ಲ. ಸಂಗಾತಿಯಿಂದ ಉತ್ತಮ ಸಹಕಾರ ದೊರೆಯುತ್ತದೆ. ಪಾಲುಗಾರಿಕೆಯ ವ್ಯಾಪಾರದಲ್ಲಿ ಉತ್ತಮ ಲಾಭಾಂಶ ದೊರೆಯುತ್ತದೆ. ನಿಮ್ಮ ಕೆಲಸ ಕಾರ್ಯಗಳನ್ನು ಆತ್ಮೀಯರು ಪ್ರಶಂಶಿಸುತ್ತಾರೆ. ಜಗಳ ಕದನದ ವೇಳೆ ಮೌನ ವಹಿಸುವಿರಿ.
ವೃಶ್ಚಿಕ ರಾಶಿ
ದಂಪತಿಗಳ ನಡುವೆ ವಿಶೇಷವಾದ ಪ್ರೀತಿ ವಿಶ್ವಾಸ ಬೆಳೆಯುತ್ತದೆ. ಹಣಕಾಸಿನ ತೊಂದರೆ ಕಂಡುಬರುವುದಿಲ್ಲ. ಐಷಾರಾಮಿ ವಾಹನವನ್ನು ಕೊಳ್ಳುವಿರಿ. ಯಾವುದೇ ಕೆಲಸವನ್ನು ಬೇರೊಬ್ಬರ ಸಹಾಯವಿಲ್ಲದೆ ಪೂರ್ಣಗೊಳಿಸಬಲ್ಲಿರಿ. ಸ್ತ್ರೀಯರ ನಡುವೆ ಅನಾವಶ್ಯಕ ವಾದ ವಿವಾದಗಳಿರುತ್ತವೆ. ಬಂದು ಬಳಗದವರ ಜೊತೆ ಅಥವಾ ಆತ್ಮೀಯರ ಜೊತೆ ವಿವಾಹವಾಗುತ್ತದೆ. ಸಂಗಾತಿಯ ಆರೋಗ್ಯದಲ್ಲಿ ತೊಂದರೆ ಕಂಡು ಬರುತ್ತದೆ. ಮಕ್ಕಳ ಜೊತೆಯಲ್ಲಿ ಉತ್ತಮ ಬಾಂಧವ್ಯ ಇರುವುದಿಲ್ಲ. ಉದ್ಯೋಗದ ಕಾರಣವಾಗಿ ದಂಪತಿಗಳು ಬೇರೆ ಬೇರೆ ಸ್ಥಳಗಳಲ್ಲಿ ನೆಲೆಸಬೇಕಾಗುತ್ತದೆ. ಆತುರದಿಂದ ತಪ್ಪು ನಿರ್ಧಾರವನ್ನು ತೆಗೆದುಕೊಳ್ಳುವಿರಿ. ಸ್ವಂತ ಭೂಮಿ ಅಥವಾ ಮನೆಯ ಲಭ್ಯತೆ ಇರುತ್ತದೆ. ಅನಾವಶ್ಯಕವಾಗಿ ಎಲ್ಲರೊಂದಿಗೆ ಕೋಪದಿಂದ ವರ್ತಿಸುವಿರಿ. ನಿಮ್ಮ ಮಾತಿನಿಂದ ಬೇರೆಯವರ ಮನಸ್ಸನ್ನು ಗೆಲ್ಲುವಿರಿ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಗಳಿಸುತ್ತಾರೆ. ಮುಂಗೋಪದಿಂದ ಆತ್ಮೀಯರ ಜೊತೆ ವಾದ ವಿವಾದದಲ್ಲಿ ತೊಡಗುವಿರಿ. ಸ್ವಂತ ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ವರಮಾನವಿರುತ್ತದೆ. ಉದ್ಯೋಗದಲ್ಲಿ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ. ಅನಿವಾರ್ಯವಾಗಿ ಉದ್ಯೋಗವನ್ನು ಬದಲಾಯಿಸಬೇಕಾದ ಪರಿಸ್ಥಿತಿ ಎದುರಾಗುತ್ತದೆ.
ಧನಸ್ಸು ರಾಶಿ
ನಿಮ್ಮಲ್ಲಿರುವ ಅತಿಯಾದ ಒಳ್ಳೆಯತನವೇ ಸಂದಿಗ್ದ ಪರಿಸ್ಥಿತಿಯನ್ನು ಉಂಟುಮಾಡುತ್ತದೆ. ಬಂಧು ಬಳಗದವರು ನಿಮ್ಮ ಪ್ರೀತಿ ವಿಶ್ವಾಸವನ್ನು ಬಯಸಿ ಬರುತ್ತಾರೆ. ವಿರೋಧಿಗಳು ಸಹ ನಿಮ್ಮ ಸ್ನೇಹ ಸಂಬಂಧಕ್ಕೆ ಹಾತೊರೆಯುತ್ತಾರೆ. ಮಕ್ಕಳ ಜೀವನದಲ್ಲಿ ಒಳ್ಳೆಯ ಫಲಗಳು ದೊರೆಯಲಿವೆ. ಅನಗತ್ಯ ಖರ್ಚು ವೆಚ್ಚುಗಳು ಇರುತ್ತವೆ. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಇರಲಿ. ಹಣಕಾಸಿನ ಕೊರತೆ ಇರುವುದಿಲ್ಲ. ಆದರೆ ಅನಾವಶ್ಯಕವಾಗಿ ಹಣದ ವಿಚಾರವಾಗಿ ಮಾನಸಿಕ ಒತ್ತಡಕ್ಕೆ ಒಳಗಾಗುವಿರಿ. ಸೋದರಿಯರ ಜೀವನದಲ್ಲಿ ಅನಗತ್ಯ ತೊಂದರೆಗಳು ಎದುರಾಗಲಿವೆ. ಆದರೆ ನಿಮ್ಮ ಮಧ್ಯಸ್ಥಿಕೆಯಿಂದ ಅವರ ಜೀವನದಲ್ಲಿ ಸುಖ ಸಂತೋಷ ಮರಳುತ್ತದೆ ಉತ್ತಮ ಸಂಗಾತಿ ಇರುತ್ತಾರೆ. ನಿಮ್ಮ ಸಂಗಾತಿಯನ್ನು ಸಂದೇಹದ ದೃಷ್ಟಿಯಿಂದ ನೋಡುವಿರಿ. ಹಣಕಾಸಿನ ವ್ಯವಹಾರದಲ್ಲಿ ಉತ್ತಮ ಆದಾಯ ದೊರೆಯುತ್ತದೆ. ಕಷ್ಟವೆನಿಸಿದರು ಮಹಿಳೆಯರು ಹಣವನ್ನು ಉಳಿಸುವಲ್ಲಿ ಯಶಸ್ವಿಯಾಗುತ್ತಾರೆ. ನೀವು ತೆಗೆದುಕೊಳ್ಳುವ ತೀರ್ಮಾನಗಳನ್ನು ಉಳಿಸಿಕೊಳ್ಳುವಲ್ಲಿ ವಿಫಲರಾಗುವಿರಿ. ಮನೆಯಲ್ಲಿನ ಮಂಗಳ ಕಾರ್ಯವು ನಡೆಯದೆ ಹೋಗುವಿರಿ. ಕೋಪ ಬಂದಷ್ಟೇ ವೇಗವಾಗಿ ಕೋಪವು ಮರೆಯಾಗುತ್ತದೆ. ಕ್ರಮೇಣವಾಗಿ ನಿಮ್ಮ ಜೀವನದಲ್ಲಿ ಅಭಿವೃದ್ಧಿಯು ಕಂಡುಬರುತ್ತದೆ.
ಮಕರ ರಾಶಿ
ಆಪತ್ತಿನ ಸಮಯದಲ್ಲಿಯೂ ಬುದ್ಧಿವಂತಿಕೆಯ ತೀರ್ಮಾನವನ್ನು ತೆಗೆದುಕೊಳ್ಳುವಿರಿ. ಸಮಾಜದಲ್ಲಿ ಉನ್ನತ ಸ್ಥಾನಮಾನ ದೊರೆಯುತ್ತದೆ. ತಾಯಿಯ ತವರು ಮನೆಯಿಂದ ನಿಮಗೆ ಹಣದ ಸಹಾಯ ದೊರೆಯುತ್ತದೆ. ಉದ್ಯೋಗದಲ್ಲಿ ನಿಮ್ಮ ಪ್ರಯತ್ನಕ್ಕೆ ತಕ್ಕ ಪ್ರತಿಕ್ರಿಯೆ ದೊರೆಯುತ್ತದೆ. ಹಿರಿಯ ಅಧಿಕಾರಿಗಳ ಪ್ರಶಂಸೆಗೆ ಬೆಳಗಾಗುವಿರಿ. ಹೆಣ್ಣು ಮಕ್ಕಳಿಗೆ ವಿಶೇಷವಾದ ಅನುಕೂಲತೆಗಳು ದೊರೆಯುತ್ತವೆ.. ಮಕ್ಕಳ ಆರೋಗ್ಯದಲ್ಲಿ ತೊಂದರೆ ಕಂಡು ಬರಲಿದೆ. ತಂದೆಗೆ ಮನೆತನದ ಆಸ್ತಿಯಲ್ಲಿ ಹೆಚ್ಚಿನ ಪಾಲು ದೊರೆಯಲಿದೆ. ದರ್ಪದ ಗುಣದಿಂದ ಬೇರೆಯವರಲ್ಲಿ ತಪ್ಪು ಕಲ್ಪನೆ ಸೃಷ್ಟಿಸುವಿರಿ. ಒಮ್ಮೆ ತೆಗೆದುಕೊಂಡ ತೀರ್ಮಾನಗಳನ್ನು ಬದಲಿಸುವುದಿಲ್ಲ. ನಿಮ್ಮಲ್ಲಿ ಕಟ್ಟುನಿಟ್ಟಾದ ನಡೆನುಡಿ ಕಂಡುಬರುತ್ತದೆ. ಚಿನ್ನ ಬೆಳ್ಳಿಯ ಪದಾರ್ಥಗಳನ್ನು ಕೊಳ್ಳುವಿರಿ. ಉಷ್ಣದ ತೊಂದರೆ ನಿಮ್ಮನ್ನು ಕಾಡಲಿದೆ. ಸೋದರ ಸೋದರಿಯ ಜೊತೆಯಲ್ಲಿ ಉತ್ತಮ ಒಡನಾಟ ಇರುತ್ತದೆ. ಮಗಳಿಗೆ ವಿವಾಹ ಯೋಗವಿದೆ. ಅಧಿಕಾರಿಗಳಾಗಿದ್ದಲ್ಲಿ ಉದ್ಯೋಗದಲ್ಲಿ ಉತ್ತಮ ಬದಲಾವಣೆಗಳನ್ನು ಮಾಡುವಿರಿ. ಕಷ್ಟಪಟ್ಟು ದುಡಿದ ಹಣವು ಜನೋಪಕಾರಿ ಕೆಲಸಗಳಿಗೆ ಖರ್ಚಾಗುತ್ತದೆ. ಬೇರೆಯವರ ತಪ್ಪಿಗೆ ನಿಮ್ಮನ್ನು ಹೊಣೆಗಾರರನ್ನಾಗಿ ಮಾಡಬಹುದು ಎಚ್ಚರಿಕೆ ಇರಲಿ.
ಕುಂಭ ರಾಶಿ
ಒಳ್ಳೆಯ ಕೆಲಸ ಕಾರ್ಯಗಳನ್ನು ಮಾಡುವಿರಿ. ಕುಟುಂಬದ ನೋವು ಮರೆಯಾಗಿ ನೆಮ್ಮದಿ ನೆಲೆಸುವಂತೆ ಮಾಡುವಿರಿ. ನಿಮ್ಮಿಂದ ಸೋದರ ಸೋದರಿಯಲ್ಲಿ ಸಾಕಷ್ಟು ಸಹಾಯ ದೊರೆಯುತ್ತದೆ. ಸುಖ ಸಂತೋಷದ ಜೀವನ ನಿಮ್ಮದಾಗುತ್ತದೆ. ತಪ್ಪು ಮಾಡಿದವರನ್ನು ದೂರ ಮಾಡದೆ ತಪ್ಪನ್ನು ಸರಿಪಡಿಸುವಿರಿ. ನಿಮ್ಮಲ್ಲಿರುವ ಕ್ಷಮಾ ಗುಣ ಎಲ್ಲರ ಮನಸೆಳೆಯುತ್ತದೆ. ಸ್ವಂತ ವಾಹನ ಕೊಳ್ಳುವಿರಿ. ನಿಮ್ಮ ತಾಯಿಯವರಿಗೆ ಅನಾರೋಗ್ಯವಿರುತ್ತದೆ. ಸಂಗಾತಿಯೊಂದಿಗೆ ಅನಾವಶ್ಯಕ ಮನುಸ್ತಾಪವಿರುತ್ತದೆ. ಯಾತ್ರಾ ಸ್ಥಳಗಳಿಗೆ ಭೇಟಿ ನೀಡುವಿರಿ. ಸ್ವಂತ ವ್ಯಾಪಾರ ವ್ಯವಹಾರದಲ್ಲಿ ಉತ್ತಮ ವರಮಾನ ಇರುತ್ತದೆ. ನಿಮ್ಮ ಮನದ ಭಾವನೆ ಬೇರೆಯವರಿಗೆ ಅರ್ಥವಾಗುವುದಿಲ್ಲ. ಆದಾಯಕ್ಕೆ ತಕ್ಕ ಖರ್ಚು ವೆಚ್ಚಗಳಿರುತ್ತವೆ. ನಿಮ್ಮನ್ನು ಹೊಗಳಿ ಕೆಲಸ ಸಾಧಿಸುವ ಜನರಿದ್ದಾರೆ. ಗುಪ್ತವಾಗಿ ಹಣವನ್ನು ಸಂಗ್ರಹ ಮಾಡುವಿರಿ. ಉದ್ಯೋಗದಲ್ಲಿ ಯಾವುದೇ ಬದಲಾವಣೆಗಳು ಕಾಣುವುದಿಲ್ಲ. ಪ್ರಯತ್ನ ಪಟ್ಟಲ್ಲಿ ಉದ್ಯೋಗವನ್ನು ಬದಲಿಸಬಹುದು. ಆರೋಗ್ಯದ ಬಗ್ಗೆ ಗಮನವಿರಲಿ. ಪರಿಸ್ಥಿತಿಯ ಒತ್ತಡವನ್ನು ಎದುರಿಸಿ ನಿಮ್ಮತನವನ್ನು ಉಳಿಸಿಕೊಳ್ಳುವಿರಿ. ವಿದ್ಯಾರ್ಥಿಗಳು ಗುರು ಹಿರಿಯರ ಮನಸ್ಸನ್ನು ಗೆಲ್ಲುತ್ತಾರೆ. ಮನೆತನದ ವ್ಯಾಜ್ಯವು ಸಂಧಾನದಿಂದ ಕೊನೆಗೊಳ್ಳುತ್ತದೆ.
ಮೀನ ರಾಶಿ
ಉತ್ತಮ ಆದಾಯ ಇರುತ್ತದೆ. ಆದರೆ ಅನಗತ್ಯ ಖರ್ಚು ವೆಚ್ಚಗಳಿರುತ್ತವೆ. ದಾಕ್ಷಿಣ್ಯಕ್ಕೆ ಒಳಗಾಗಿ ಹಣವನ್ನು ದೇಣಿಗೆ ನೀಡುವಿರಿ. ನಿಮ್ಮಿಂದ ಸೋದರರಿಗೆ ಸಹಾಯ ಸಹಕಾರ ದೊರೆಯುತ್ತದೆ. ಒಮ್ಮೆ ತೀರ್ಮಾನಿಸಿದ ಕೆಲಸ ಕಾರ್ಯಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸುವಿರಿ. ಲಾಭವಿಲ್ಲದ ಯಾವುದೇ ಕೆಲಸಗಳನ್ನು ಮಾಡುವುದಿಲ್ಲ. ನಿಮ್ಮ ಸಂಗಾತಿಯು ಬುದ್ಧಿವಂತಿಕೆಯ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಾರೆ. ನಿಮ್ಮ ಸಂಗಾತಿ ಎಲ್ಲರೊಂದಿಗೆ ವಿಶ್ವಾಸದಿಂದ ನಡೆಯುತ್ತಾರೆ. ಹೆಣ್ಣು ಮಕ್ಕಳ ಜೀವನದಲ್ಲಿ ಅನಿರೀಕ್ಷಿತ ಬದಲಾವಣೆಗಳು ಉಂಟಾಗಲಿವೆ. ವಿದೇಶದಲ್ಲಿ ಉದ್ಯೋಗ ದೊರೆಯುವ ಸಾಧ್ಯತೆಗಳಿವೆ. ವಿದ್ಯಾರ್ಥಿಗಳು ಕಲಿಕೆಯಲ್ಲಿ ಉನ್ನತಮಟ್ಟ ತಲುಪಲಿದ್ದಾರೆ. ನಿಮ್ಮ ಮನಸ್ಸಿನ ವಿಚಾರಗಳನ್ನು ಬೇರೆಯವರಿಗೆ ತಿಳಿಸುವುದಿಲ್ಲ. ಮಾತಿನ ಮೇಲೆ ಹತೋಟಿ ಸಾಧಿಸುವಿರಿ. ಸ್ವಂತ ಭೂಮಿ ಅಥವಾ ಮನೆಯನ್ನು ಕೊಳ್ಳುವಿರಿ. ತಾಯಿಯವರ ಆರೋಗ್ಯದಲ್ಲಿ ಉತ್ತಮ ಪ್ರಗತಿ ಕಂಡುಬರುತ್ತದೆ. ಉದ್ಯೋಗದಲ್ಲಿ ಹಿರಿಯ ಅಧಿಕಾರಿಗಳ ಜೊತೆಯಲ್ಲಿ ಅನಗತ್ಯ ವಾದ ವಿವಾದಗಳಿರುತ್ತವೆ. ಬಹು ದಿನದಿಂದ ಕಾಡುತ್ತಿದ್ದ ಅನಾರೋಗ್ಯವು ಬಗೆಹರಿಯುತ್ತದೆ. ಹೆಣ್ಣು ಮಕ್ಕಳು ಕುಟುಂಬದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಾರೆ. ಸಭೆ ಸಮಾರಂಭಗಳಿಂದ ದೂರ ಉಳಿಯುವಿರಿ.
ಬರಹ: ಎಚ್. ಸತೀಶ್, ಜ್ಯೋತಿಷಿ, ಬೆಂಗಳೂರು
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ವಾರ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).